ನೋಯ್ಡಾ: ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಚಿರತೆ ಈಗ ಸಾಮಾನ್ಯವಾಗಿ ಕಾಣತೊಡಗಿದ್ದು, ನೊಯ್ಡಾದ ಅಜ್ನಾರಾ ಲೆ ಗಾರ್ಡನ್ ಸೊಸೈಟಿಯಲ್ಲಿಯೂ ಆತಂಕ ಸೃಷ್ಟಿಸಿತು.
ಈ ಜನವಸತಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಳಿ ಚಿರತೆ ಓಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ. ಸ್ಥಳೀಯ ನಿವಾಸಿಗಳು ಇದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.
ಚಿರತೆಯ ಪತ್ತೆಗೆ ಅರಣ್ಯ ಇಲಾಖೆ ಶೋಧ ಕಾರ್ಯ ಆರಂಭಿಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡವೊಂದು ಧಾವಿಸಿದೆ.
ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳ ತಂಡಕ್ಕೆ ಸಹಾಯ ಮಾಡಲು ಮೀರತ್‌ನ ತಜ್ಞರನ್ನು ಸಹ ನಿಯೋಜಿಸಲಾಗಿದೆ. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯಿಂದ ಬೋನು ಹಾಕಲು ಆದೇಶಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ (ಎಫ್‌ಡಿಒ) ಪ್ರಮೋದ್ ಶ್ರೀವಾಸ್ತವ ಹೇಳಿದ್ದಾರೆ.
https://twitter.com/sonutina2/status/1610504286341074944?ref_src=twsrc%5Etfw%7Ctwcamp%5Etweetembed%7Ctwterm%5E1610504286341074944%7Ctwgr%5E2334dfba98f0bbae90db89acf17a54fc3339c614%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-leopard-enters-society-in-greater-noida-creates-panic-among-residents
https://twitter.com/cs_narendra/status/1610525649424519169?ref_src=twsrc%5Etfw%7Ctwcamp%5Etweetembed%7Ctwterm%5E1610525649424519169%7Ctwgr%5E2334dfba98f0bbae90db89acf17a54fc3339c614%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-leopard-enters-society-in-greater-noida-creates-panic-among-residents