54ರ ವಯಸ್ಸಲ್ಲೂ ಸಮ್ಮರ್ ಸಾಲ್ಟ್; ಜಾಂಟಿ ರೋಡ್ಸ್ ವಿಡಿಯೋ ನೋಡಿ ನೆಟ್ಟಿಗರು ಬೆರಗು

Watch Jonty Rhodes effortlessly doing somersault at the age 54 on the trampoline

ದಕ್ಷಿಣ ಅಫ್ರಿಕಾದ ವೃತ್ತಿಪರ ಕ್ರಿಕೆಟ್ ತರಬೇತುದಾರ ಜಾಂಟಿ ರೋಡ್ಸ್ 54 ವರ್ಷ ವಯಸ್ಸಿನಲ್ಲೂ ಯುವ ಉತ್ಸಾಹಿಯಂತಿದ್ದಾರೆ. ದೇಹಕ್ಕೆ ವಯಸ್ಸಾಗಿದ್ರೂ ಮಾನಸಿಕವಾಗಿ ಮಗುವಿನಂತೆ ಕ್ರಿಯಾಶೀಲರಾಗಿದ್ದಾರೆ.

30 ಮತ್ತು 40 ರ ವಯಸ್ಸಿನಲ್ಲಿ ಸಮ್ಮರ್ ಸಾಲ್ಟ್ ಮಾಡುವುದು ಕೆಲವರಿಗೆ ಅಸಾಧ್ಯವಾಗಬಹುದು. ಆದರೆ ಅದು ಜಾಂಟಿ ರೋಡ್ಸೆಗೆ ಅಸಾಧ್ಯವಲ್ಲ. ಅವರು ತಮ್ಮ 50 ರ ದಶಕದಲ್ಲಿ ಟ್ರ್ಯಾಂಪೊಲೈನ್ ನಲ್ಲಿ ಅದನ್ನು ಸಲೀಸಾಗಿ ಮಾಡಿದ್ದಾರೆ.

ಟ್ರ್ಯಾಂಪೊಲೈನ್‌ನಲ್ಲಿ ಏನಾದರೂ ವಿಶೇಷವಾದದ್ದನ್ನ ಮಾಡಬಹುದೇ ಎಂದು ನನ್ನ ಮಕ್ಕಳು ಕೇಳಿದಾಗ ನಾನು ಸಮ್ಮರ್ ಸಾಲ್ಟ್ ಮಾಡಿದೆ. 40 ವರ್ಷದ ಹಿಂದೆ ನಾನು ಶಾಲೆಯಲ್ಲಿದ್ದಾಗ ಹಿಂದಕ್ಕೆ ಪಲ್ಟಿ ಹೊಡೆಯುತ್ತಿದ್ದೆ ಎಂದು ಹೆಂಡತಿ ಪ್ರಶ್ನೆಗೆ ಉತ್ತರಿಸಿದ್ದಾಗಿ ರೋಡ್ಸ್ ತಮಾಷೆ ಮಾಡಿದ್ದಾರೆ.

ತಂದೆಯ ಸಮ್ಮರ್ ಸಾಲ್ಟ್ ನೋಡಿದ ರೋಡ್ಸ್‌ ನ ಮಕ್ಕಳು ತಮ್ಮ ತಂದೆಯ ಈ ಸಾಹಸವನ್ನು ಇಷ್ಟಪಟ್ಟು ಹೊಸ ಹುರುಪಿನೊಂದಿಗೆ ಟ್ರ್ಯಾಂಪೊಲೈನ್‌ನಲ್ಲಿ ಜಿಗಿಯಲು ಪ್ರಾರಂಭಿಸಿದರು. ರೋಡ್ಸ್ ನ ವೈರಲ್ ವೀಡಿಯೊವನ್ನು ಎಲ್ಲರೂ ಇಷ್ಟಪಟ್ಟಿದ್ದು ವಾಹ್ ಎಂದು ಕಮೆಂಟ್ ಮಾಡ್ತಿದ್ದಾರೆ.

ವಿರಾಟ್ ಕೊಹ್ಲಿ ಫಿಟ್ನೆಸ್ ಕ್ರಾಂತಿಯನ್ನು ತರುವ ಮೊದಲು, 90 ರ ದಶಕ ಮತ್ತು 2000 ರ ದಶಕದ ಆರಂಭದಲ್ಲಿ ಫಿಟ್ನೆಸ್ ವಿಚಾರದಲ್ಲಿ ಜಾಂಟಿ ರೋಡ್ಸ್ ಹೆಸರು ಯಾವಾಗಲೂ ಮುನ್ನೆಲೆಯಲ್ಲಿತ್ತು. ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, 54 ವರ್ಷದ ಅವರು ಪ್ರಸ್ತುತ ಕೋಚ್ ಆಗಿದ್ದಾರೆ. ರೋಡ್ಸ್ ಒಂದು ದಶಕದ ಕಾಲ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಕೋಚ್ ಆಗಿದ್ದರು. ಪ್ರಸ್ತುತ, ಅವರು ಪಂಜಾಬ್ ಕಿಂಗ್ಸ್ ತಂಡದಲ್ಲಿ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

https://twitter.com/JontyRhodes8/status/1708446095548825679?ref_src=twsrc%5Etfw%7Ctwcamp%5Etweetembed%7Ctwterm%5E1708446095548825

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read