ಪತ್ನಿಯ ಫೋಟೋ ಹಚ್ಚೆ ಹಾಕಿಸಿ ಹುಟ್ಟುಹಬ್ಬಕ್ಕೆ ಗಿಫ್ಟ್​: ನೆಟ್ಟಿಗರು ಫಿದಾ

ಅನೇಕ ಜನರು ತಮ್ಮ ಪ್ರೀತಿ ಪಾತ್ರರಿಗಾಗಿ ಹಲವಾರು ಸರ್​ಪ್ರೈಸ್​ಗಳನ್ನು ನೀಡುತ್ತಾರೆ. ತಮ್ಮ ಹತ್ತಿರವಿರುವ ಯಾರನ್ನಾದರೂ ಆಶ್ಚರ್ಯಗೊಳಿಸಲು ಏನನ್ನಾದರೂ ಮಾಡುತ್ತಾರೆ. ಅಂತಹ ಒಂದು ರೋಮ್ಯಾಂಟಿಕ್ ಗೆಸ್ಚರ್ನಲ್ಲಿ, ಒಬ್ಬ ವ್ಯಕ್ತಿ ತನ್ನ ತೋಳಿನ ಮೇಲೆ ತನ್ನ ಹೆಂಡತಿಯ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಂಡು ಪತ್ನಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ. ಇದು ಆನ್‌ಲೈನ್‌ನಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ.

ಇದರ ವಿಡಿಯೋವನ್ನು ಟ್ಯಾಟೂ ಕಲಾವಿದ ಮಹೇಶ್ ಚವಾಣ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ತಮ್ಮ ಹೆಂಡತಿಯ ಬಳಿಗೆ ಹೋಗುತ್ತಾರೆ, ಅಲ್ಲಿ ಅವರ ಮಗು ಹಾಸಿಗೆಯ ಮೇಲೆ ಇರುವುದನ್ನು ನೋಡಬಹುದು. ವ್ಯಕ್ತಿಯ ಕೈಗೆ ಬಟ್ಟೆ ಮತ್ತು ಪ್ಲಾಸ್ಟಿಕ್ ಹಾಳೆಯನ್ನು ಸುತ್ತಿಕೊಳ್ಳಲಾಗಿದೆ. ನಂತರ ಪತ್ನಿಗೆ ಅವರು ಅದನ್ನು ತೆರೆಯಲು ಕೇಳುತ್ತಾರೆ.

ಪತ್ನಿ ಬಟ್ಟೆಯನ್ನು ತೆಗೆದಾಗ ದಿಗ್ಭ್ರಮೆಯಾಗುತ್ತದೆ. ಈ ಟ್ಯಾಟೂವನ್ನು ನೋಡಿದ ವ್ಯಕ್ತಿಯ ಪತ್ನಿ ಆಘಾತಕ್ಕೊಳಗಾಗಿ ಓ ಮೈ ಗಾಡ್​ ಎನ್ನುವುದನ್ನು ನೋಡಬಹುದು. ಪೋಸ್ಟ್‌ನ ಪ್ರಕಾರ, ಪತ್ನಿಯ ಹುಟ್ಟುಹಬ್ಬಕ್ಕೆ ಈ ಗಿಫ್ಟ್​ ಪತಿ ನೀಡಿದ್ದು, ಇದಕ್ಕೆ ನೆಟ್ಟಿಗರಿಂದ ಅಭಿನಂದನೆ ವ್ಯಕ್ತವಾಗಿದೆ.

https://youtu.be/BcwmoliExPY

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read