VIDEO | ಪ್ಯಾರಿಸ್ ಪ್ರವಾಸದಲ್ಲಿ ಗೆಳತಿಗೆ ಪ್ರಪೋಸ್; ಆಕೆ ಮಾಡಿದ್ದೇನು ಅಂತ ಕೇಳಿದ್ರೆ ಶಾಕ್ ಆಗ್ತೀರಾ…!

ಪ್ರೀತಿ ನಿವೇದನೆ ಮಾಡೋದು ಸುಲಭವಲ್ಲ. ಪ್ರೀತಿಸುವ ವ್ಯಕ್ತಿಗೆ ಪ್ರಪೋಸ್‌ ಮಾಡ್ಬೇಕು ಅಂದ್ರೆ ಗುಂಡಿಗೆ ಬೇಕು. ಪ್ರೀತಿಸುತ್ತಿರುವ ವ್ಯಕ್ತಿ ಮುಂದೆ ಬಂದಾಗ ಎದೆ ಬಡಿತ ಹೆಚ್ಚಾಗುತ್ತೆ. ಹೇಳುವ ಮಾತನ್ನು ಹೇಳೋಕೆ ಸಾಧ್ಯವಾಗೋದೇ ಇಲ್ಲ. ತಿಂಗಳುಗಟ್ಟಲೆ ಅದಕ್ಕೆ ತಯಾರಿ ನಡೆಸಿ, ಕಷ್ಟಪಟ್ಟು ಪ್ರಫೋಸ್‌ ಮಾಡಿದ ನಂತ್ರ ಎದುರಿಗಿರುವ ವ್ಯಕ್ತಿ ಪ್ರೀತಿ ಸ್ವೀಕರಿಸ್ತಾರೆ ಎನ್ನಲು ಸಾಧ್ಯವಿಲ್ಲ. ಅನೇಕ ಬಾರಿ ಎದುರಿಗಿರುವ ವ್ಯಕ್ತಿ ಪ್ರೀತಿಯನ್ನು ನಿರಾಕರಿಸುವ ಸಾಧ್ಯತೆ ಇರುತ್ತದೆ. ಇದು ಮನಸ್ಸಿಗೆ ವಿಪರೀತ ನೋವುಂಟು ಮಾಡುತ್ತದೆ. ಈ ವ್ಯಕ್ತಿಗೂ ಅದೇ ಸ್ಥಿತಿ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನ ಪ್ರಪೋಸ್‌ ವಿಡಿಯೋ ವೈರಲ್‌ ಆಗಿದೆ. ಪ್ಯಾರಿಸ್‌ ನಲ್ಲಿ ಹುಡುಗಿ ಫೋಟೋ ಹೊಡೆಯುತ್ತಿದ್ದ ವೇಳೆ ಆಕೆ ಹಿಂದೆ ಮಂಡಿಯೂರಿ ನಿಂತ ಹುಡುಗ, ಉಂಗುರವನ್ನು ಹಿಡಿಯುತ್ತಾನೆ. ಅದನ್ನು ನೋಡಿದ ಹುಡುಗಿ ಶಾಕ್‌ ಗೆ ಒಳಗಾಗ್ತಾಳೆ. ಒಬ್ಬೆ ಮುಖ ಮುಚ್ಚಿಕೊಳ್ಳುವ ಹುಡುಗಿಗೆ ಏನು ಮಾಡ್ಬೇಕು ತಿಳಿಯೋದಿಲ್ಲ. ಅಲ್ಲಿ ನೆರೆದಿದ್ದ ಜನರೆಲ್ಲ ಚಪ್ಪಾಳೆ ತಟ್ಟುತ್ತ, ಹುಡುಗಿ ಏನು ಹೇಳ್ತಾರೆ ಎನ್ನುವ ನಿರೀಕ್ಷೆಯಲ್ಲಿರ್ತಾರೆ.

ಅಲ್ಲಿ ನೆರೆದಿದ್ದ ಎಲ್ಲರ ನಿರೀಕ್ಷೆ ಸುಳ್ಳಾಗುತ್ತದೆ. ಹುಡುಗಿ, ಹುಡುಗನ ಪ್ರಪೋಸ್‌ ಸ್ವೀಕರಿಸದೆ ಅಲ್ಲಿಂದ ಓಡಿ ಹೋಗ್ತಾಳೆ. ಇದ್ರಿಂದ ಬೇಸರಗೊಳ್ಳುವ ಹುಡುಗ ಎಲ್ಲರ ಮುಂದೆ ಕಣ್ಣೀರು ಸುರಿಸ್ತಾನೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read