ಯೂಟ್ಯೂಬರ್ ಹಾಗೂ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್ ಎಂದು ತನ್ನನ್ನು ಕರೆದುಕೊಳ್ಳುವ ಲವ್ಲೀ ಸಹಾನಿ ಎಂಬ ವ್ಯಕ್ತಿ ಪದೇ ಪದೇ ತಪ್ಪಾದ ಕಾರಾಣಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ.
ಪಾಟ್ನಾ ದ ರಸ್ತೆಗಳಲ್ಲಿ ತಮ್ಮ ಬೈಕನ್ನೇರಿ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುತ್ತಾ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ ಲವ್ಲಿ.
ಅಭೀಷೇಕ್ ಹೆಸರಿನ ಟ್ವಿಟ್ಟಿಗರೊಬ್ಬರು ಈಕೆಯ ಅಪಾಯಕಾರಿ ಸ್ಟಂಟ್ ಒಂದರ ವಿಡಿಯೋವೊಂದನ್ನು ಶೇರ್ ಮಾಡಿದ್ದು, “ಹಲೋ ಬಿಹಾರ್ ಪೊಲೀಸ್, ರಸ್ತೆಯಲ್ಲಿ ಈ ರೀತಿಯ ಸ್ಟಂಟ್ ಮಾಡುವುದು ಮಾನ್ಯವೇ?” ಎಂದು ಕೇಳಿದ್ದಾರೆ.
ಸಾರ್ವಜನಿಕರ ಗಮನ ಸೆಳೆಯುವ ಹುಚ್ಚಿನಲ್ಲಿ ಮನಸೋಯಿಚ್ಛೆ ಸ್ಟಂಟ್ ಮಾಡುವ ಜೋಡಿಯೊಂದು ನಡುರಸ್ತೆಯಲ್ಲೇ ತಮ್ಮ ವಾಹನವನ್ನು ನಿಲ್ಲಿಸಿ ಬಾದ್‌ಶಾ ಚಿತ್ರದ ಸನಕ್ ಹಾಡಿಗೆ ನೃತ್ಯ ಮಾಡಿ ರೀಲ್ಸ್ ಸೃಷ್ಟಿಸಿದ ಘಟನೆ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು.
https://twitter.com/AbhishekSay/status/1640364185573019651?ref_src=twsrc%5Etfw%7Ctwcamp%5Etweetembed%7Ctwterm%5E1640364185573019651%7Ctwgr%5E1ca0a6e50696b4b3f62ff1ff65e5192dd162550f%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-girls-from-patna-perform-bike-stunt-on-road-video-goes-viral