2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದ ನಂತರ ಕೆಲವರು ಅವುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ನಿರ್ಧರಿಸಿದರೆ, ಇತರರು ಅವುಗಳನ್ನು ಶಾಪಿಂಗ್‌ಗೆ ಖರ್ಚು ಮಾಡಲು ನಿರ್ಧರಿಸಿದರು.
ಆದರೆ ಇತ್ತೀಚೆಗಷ್ಟೇ ಇಬ್ಬರು ಬಾಲಕಿಯರು 2000 ರೂಪಾಯಿ ನೋಟಿಗಾಗಿ ತುಂಬಿದ ಹುಂಡಿಯನ್ನು ಒಡೆಯುವ ವಿಡಿಯೋ ವೈರಲ್ ಆಗಿದೆ.
ವೀಡಿಯೊದಲ್ಲಿ ಹುಡುಗಿಯರು 2 ಸಾವಿರ ರೂಪಾಯಿ ನೋಟುಗಳಿದ್ದ ತಮ್ಮ ಪಿಗ್ಗಿ ಬ್ಯಾಂಕ್ ಅನ್ನು ಒಡೆದುಹಾಕಿದ್ದಾರೆ. ಒಡೆದ ಹುಂಡಿಯಲ್ಲಿ ಕೇವಲ ಐದು ನೂರು ಮತ್ತು ಎರಡು ಸಾವಿರ ರೂಪಾಯಿಗಳ ನೋಟುಗಳು ತುಂಬಿದ್ದವು. ಈ ವಿಡಿಯೋ ವೈರಲ್ ಆಗಿದೆ.