ಮತ್ತೊಬ್ಬಳೊಂದಿಗೆ ಡೇಟಿಂಗ್‌ ಮಾಡುತ್ತಿದ್ದ ಯುವಕನಿಗೆ ಹಿಗ್ಗಾಮುಗ್ಗಾ ಇಕ್ಕಿದ ಗೆಳತಿ

ತನಗೆ ವಂಚಿಸಿ ಬೇರೊಬ್ಬಳೊಂದಿಗೆ ಲಲ್ಲೆ ಹೊಡೆಯುತ್ತಿದ್ದ ಬಾಯ್‌ಫ್ರೆಂಡ್‌ ಅನ್ನು ಯುವತಿಯೊಬ್ಬಳು ರೆಡ್‌ ಹ್ಯಾಂಡ್‌ ಆಗಿ ಹಿಡಿದ ವಿಡಿಯೋ ವೈರಲ್ ಆಗಿದೆ. ಬೇರೊಬ್ಬ ಹುಡುಗಿಯೊಂದಿಗೆ ಡಿನ್ನರ್‌ ಡೇಟ್ ಎಂಜಾಯ್‌ ಮಾಡುತ್ತಿರುವ ಪುರುಷನಿಗೆ ಆತನ ಸಂಗಾತಿಗೆ ಈ ವಿಚಾರ ರೆಡ್ ಹ್ಯಾಂಡ್ ಆಗಿ ತಿಳಿದ ಬಳಿಕ ಆತನ ಜೀವನವೇ ಮೇಲು ಕೆಳಗಾದಂತೆ ಭಾಸವಾಗುತ್ತದೆ.

ತನ್ನ ಬಾಯ್‌ಫ್ರೆಂಡ್‌ ಈ ಸಲ್ಲಾಪವನ್ನು ನೋಡುತ್ತಲೇ ಯುವತಿಯು ಆತನಿಗೆ ಬೀದಿಯಲ್ಲೇ ಕಪಾಳಮೋಕ್ಷ ಮಾಡುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ.

ರಸ್ತೆ ಬದಿಯ ಈಟರಿಯೊಂದರಲ್ಲಿ ಗೆಳತಿಯೊಂದಿಗೆ ಡಿನ್ನರ್‌ ಎಂಜಾಯ್‌ ಮಾಡುತ್ತಿರುವ ಈ ಪುರುಷ ಆಕೆಗೆ ಸನಿಹವಾಗುತ್ತಿರುವ ವೇಳೆಯಲ್ಲೇ ಆ ಜಾಗಕ್ಕೆ ಬಂದ ಎಸ್‌ಯುವಿಯೊಂದು ಅಲ್ಲಿ ನಿಲ್ಲುತ್ತದೆ. ಅದರಿಂದ ಹೊರಗೆ ಬರುವ ಆತನ ಗರ್ಲ್‌ಫ್ರೆಂಡ್‌ ಈ ದೃಶ್ಯವನ್ನ ಕಂಡ ಕೂಡಲೇ ಆತನತ್ತ ಚೇರ್‌ ಎಸೆದು ಆತನ ಮುಖಕ್ಕೆ ಸಾಸ್‌ ಎರಚಿ ತನ್ನ ಸಿಟ್ಟು ಕಾರಿಕೊಳ್ಳುವುದನ್ನು ಕಾಣಬಹುದಾಗಿದೆ.

ಈ ಜೋಡಿಗೆ ಮದುವೆಯಾಗಿತ್ತೋ ಅಥವಾ ಇನ್ನೂ ಡೇಟಿಂಗ್ ಹಂತದಲ್ಲೇ ಇಂಥ ಒಂದು ಘಟನೆ ನಡೆಯಿತೋ ಎಂಬುದು ಇನ್ನೂ ತಿಳಿದು ಬಂದಿಲ್ಲ.

https://youtu.be/k9UYnK69c2Y

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read