Watch: ಟ್ರಕ್ ಇಂಜಿನ್‌ ನಲ್ಲಿತ್ತು ದೈತ್ಯ ಹೆಬ್ಬಾವು; 98 ಕಿ.ಮೀ. ಕ್ರಮಿಸಿದರೂ ಚಾಲಕನಿಗಿರಲಿಲ್ಲ ಅರಿವು

ದೈತ್ಯ ಹೆಬ್ಬಾವೊಂದು ಉತ್ತರ ಪ್ರದೇಶದಿಂದ ಬಿಹಾರಕ್ಕೆ ಟ್ರಕ್‌ ಇಂಜಿನ್‌ನಲ್ಲಿ ಅಡಗಿಕೊಂಡು ಸುಮಾರು 98 ಕಿಲೋಮೀಟರ್ ಪ್ರಯಾಣಿಸಿರುವ ಘಟನೆ ನಡೆದಿದೆ. ಟ್ರಕ್‌ನ ಬಾನೆಟ್‌ನೊಳಗೆ ದೈತ್ಯ ಸರೀಸೃಪ ಸಿಲುಕಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಪೋಸ್ಟ್ ಪ್ರಕಾರ, ಹಾವು ಇರುವುದು ಪ್ರಯಾಣದ ಉದ್ದಕ್ಕೂ ಚಾಲಕನ ಗಮನಕ್ಕೆ ಬಂದಿರಲಿಲ್ಲ.

ಟ್ರಕ್ ಉತ್ತರ ಪ್ರದೇಶದ ಕುಶಿನಗರದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದು, ಬಿಹಾರದ ನರ್ಕಟಿಯಾಗಂಜ್‌ನಲ್ಲಿ ಕೊನೆಗೊಂಡಿದೆ. ಟ್ರಕ್‌ನ ಬಾನೆಟ್‌ನಲ್ಲಿ ಹೆಬ್ಬಾವು ಸುತ್ತಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದ್ದು, ಇದನ್ನು ವೀಕ್ಷಿಸಲು ತಂಡೋಪತಂಡವಾಗಿ ಜನ ಬಂದಿದ್ದರು.

ನರ್ಕಟಿಯಾಗಂಜ್‌ನಲ್ಲಿ ನಿರ್ಮಾಣ ಯೋಜನೆಗಾಗಿ ಕುಶಿನಗರದಲ್ಲಿ ಕಲ್ಲುಗಳನ್ನು ತುಂಬುತ್ತಿದ್ದಾಗ ಹಾವು ಟ್ರಕ್‌ನ ಎಂಜಿನ್‌ಗೆ ಸೇರಿರಬಹುದು ಎಂದು ಶಂಕಿಸಲಾಗಿದೆ. ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಯೋಜನೆಗಾಗಿ ಕಲ್ಲುಗಳನ್ನು ಸಾಗಿಸಲಾಗುತ್ತಿತ್ತು.

ವೀಡಿಯೋವನ್ನು ಹಂಚಿಕೊಳ್ಳುವ ಮೂಲಕ, ಎಕ್ಸ್ ಬಳಕೆದಾರ @KiCainala, ಯುಪಿಯ ಕುಶಿನಗರದಿಂದ ಟ್ರಕ್‌ನ ಇಂಜಿನ್‌ನಲ್ಲಿ ಅಡಗಿಕೊಂಡು ಹೆಬ್ಬಾವು ನರ್ಕಟಿಯಾಗಂಜ್ ತಲುಪಿದೆ. ಕಾರ್ಮಿಕರು ಟ್ರಕ್‌ನಿಂದ ಕಲ್ಲುಗಳನ್ನು ಇಳಿಸಿದಾಗ, ಹೆಬ್ಬಾವು ಕಾಣಿಸಿಕೊಂಡಿತು ಮತ್ತು ನಂತರ ಅದನ್ನು ಬಾನೆಟ್ ತೆರೆದು ಹೊರತೆಗೆಯಲಾಯಿತು. ಹೆಬ್ಬಾವನ್ನು ಕಾಡಿಗೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ತಂಡ ತಿಳಿಸಿದೆ.

ಅಕ್ಟೋಬರ್‌ನಲ್ಲಿ, ಉತ್ತರ ಪ್ರದೇಶದ ಫತೇಪುರ್‌ನಲ್ಲಿ ಸುಮಾರು 10 ಅಡಿ ಉದ್ದದ ದೈತ್ಯ ಹೆಬ್ಬಾವು ಭತ್ತದ ಗದ್ದೆಯಲ್ಲಿ ಇರುವ ವೀಡಿಯೊ ವೈರಲ್ ಆಗಿತ್ತು. ರೈತರು ಗೋಣಿಚೀಲ ಮತ್ತು ದಪ್ಪ ಹಗ್ಗದ ಸಹಾಯದಿಂದ ಹೆಬ್ಬಾವನ್ನು ಹಿಡಿದು ಹೊರ ಬಿಡುತ್ತಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿತ್ತು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read