ಕೊಯಮತ್ತೂರು : ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿಯ ಅರಣ್ಯ ಪ್ರದೇಶದಲ್ಲಿ ಹೊಂಡಕ್ಕೆ ಬಿದ್ದ ಆನೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದು, ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಆನೆ ಮರಿಯನ್ನು ರಕ್ಷಿಸಿ ತಾಯಿಯೊಂದಿಗೆ ಜೊತೆಗೂಡಿಸಿದ ರಾಜ್ಯ ಅರಣ್ಯ ಅಧಿಕಾರಿಗಳಿಗೆ ತಮಿಳುನಾಡು ಸರ್ಕಾರದ ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ.
ಆನೆಮರಿ ನೀರು ಕುಡಿಯಲು ಹೋಗಿ ಹೊಂಡಕ್ಕೆ ಬಿದ್ದಿದ್ದು, ತಾಯಿ ಆನೆ ತನ್ನ ಮರಿಯನ್ನು ರಕ್ಷಿಸಲು ಪ್ರಯತ್ನಿಸಿದರೂ ಆಗಲಿಲ್ಲ. ಆಗ ರಾಜ್ಯ ಅಗ್ನಿಶಾಮಕ ಅಧಿಕಾರಿಗಳು ಮರಿ ಆನೆಯನ್ನು ರಕ್ಷಿಸಿದ್ದಾರೆ. ಈ ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮಿಳುನಾಡು ಅರಣ್ಯ ಅಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
https://twitter.com/supriyasahuias/status/1761213011153289465?ref_src=twsrc%5Etfw%7Ctwcamp%5Etweetembed%7Ctwterm%5E1761213011153289465%7Ctwgr%5E443dbc1198d3a603a3d3bc534681863250ecff5c%7Ctwcon%5Es1_&ref_url=https%3A%2F%2Fwww.news9live.com%2Fstate%2Ftamil-nadu%2Fwatch-mother-elephant-thanks-tamil-nadu-foresters-for-rescuing-calf-from-canal-in-coimbatore-2448286