Video | ಕಣ್ಣಂಚನ್ನು ತೇವಗೊಳಿಸುತ್ತೆ ಸಹೋದರರಿಬ್ಬರ ಸಂಭಾಷಣೆ

A clip from the video shared by CA Tushar Vasani

ಸಹೋದರ ಸಂಬಂಧ ಅಂದರೆ ಹೀಗಿರಬೇಕು ಎಂದು ತೋರುವ ನಿದರ್ಶನವೊಂದರಲ್ಲಿ ಅಣ್ಣ-ತಮ್ಮಂದಿರು ವಿಡಿಯೋವೊಂದು ಇನ್‌ಸ್ಟಾಗ್ರಾಂಲ್ಲಿ ಪೋಸ್ಟ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.

ಇನ್‌ಸ್ಟಾಗ್ರಾಂನಲ್ಲಿ 11 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಚಾರ್ಟರ್ಡ್ ಅಕೌಂಟೆಂಟ್ ತುಶಾರ್‌ ವಾಸಾನಿ, ಫೆಬ್ರವರಿ 2022ರಲ್ಲಿ ತಾವು ಸಿಎ ಪರೀಕ್ಷೆಯಲ್ಲಿ ಪಾಸಾದ ಸಂದರ್ಭ ತಮ್ಮ ಸಹೋದರನಿಗೆ ಕರೆ ಮಾಡಿದ ಘಳಿಗೆಯ ವಿಡಿಯೋವನ್ನು ಶೇರ್‌ ಮಾಡಿದ್ದಾರೆ.

“ಗೋಲು ಭಾಯ್‌, ತುಶಾರ್‌ ವಾಸಾನಿ ಮಾತನಾಡುತ್ತಿದ್ದೇನೆ,” ಎಂದು ಹೇಳುವ ಸಿಎ ತಮ್ಮ ಅಣ್ಣನಿಗೆ ಈ ಶುಭ ಸುದ್ದಿಯನ್ನು ತಿಳಿಸಿದ್ದಾರೆ. ಮೊದಲಿಗೆ ಸ್ವಲ್ಪ ಗೊಂದಲಕ್ಕೀಡಾದ ತುಶಾರ್‌ ಸಹೋದರ, ತಮ್ಮ ತನ್ನ ಜೀವನದ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾನೆ ಎಂದು ತಿಳಿಯುತ್ತಲೇ ಸಂತಸದಲ್ಲಿ ತೇಲುತ್ತಾರೆ.

“ನನ್ನ ಕುಟುಂಬದ ಬೆಂಬಲವಿಲ್ಲದೇ ಇದ್ದರೆ ನಾನು ಇದನ್ನು ಅರ್ಧದಲ್ಲೇ ನಿಲ್ಲಿಸಿಬಿಡುತ್ತಿದ್ದೆ,” ಎಂದು ವಿಡಿಯೋಗೆ ಹಾಕಿರುವ ಕ್ಯಾಪ್ಷನ್‌ನಲ್ಲಿ ತಿಳಿಸಲಾಗಿದೆ.

ಇಬ್ಬರೂ ಸಹೋದರರು ಆನಂದ ಭಾಷ್ಪ ಹಾಕುವ ಮೂಲಕ ಈ ಶುಭ ಸುದ್ದಿಯನ್ನು ಸಂಭ್ರಮಿಸಿದ್ದಾರೆ.

https://www.youtube.com/watch?v=6l3ZGxJzmAE&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read