ಬಸ್​ ನಿಲ್ಲಿಸಿ ಚಿಕನ್​ ತರಲು ಓಡಿದ ಚಾಲಕ: ವಿಡಿಯೋ ವೈರಲ್​

ಕೆಲಸದಿಂದ ಮನೆಗೆ ಹಿಂದಿರುಗುವಾಗ ದಿನಸಿ ಮತ್ತು ಇತರ ವಸ್ತುಗಳನ್ನು ತರಲು ರಸ್ತೆ ಮಧ್ಯೆ ಗಾಡಿ ನಿಲ್ಲಿಸಿ ಹೋಗುವುದು ಮಾಮೂಲು. ಆದರೆ ಇಲ್ಲೊಬ್ಬ ಬಸ್​ ಡ್ರೈವರ್​ ಚಿಕನ್​ ತರುವ ಸಲುವಾಗಿ ಬಸ್ಸನ್ನು ಮಧ್ಯದಲ್ಲಿ ಸ್ಟಾಪ್​ ಮಾಡಿ ಓಡಿಹೋಗುವ ವಿಡಿಯೋ ವೈರಲ್​ ಆಗಿದೆ.

ಇದು ನಡೆದಿರುವುದು ಇಂಗ್ಲೆಂಡ್​ನಲ್ಲಿ. ಬಸ್ ಚಾಲಕನೊಬ್ಬ ಅಂಗಡಿಯಿಂದ ಚಿಕನ್ ಪಡೆಯಲು ಓಡಿದ್ದಾನೆ. ಸ್ವಲ್ಪ ಸಮಯದ ನಂತರ, ಅವನು ಮತ್ತೆ ಬಸ್ ಓಡಿಸಲು ಓಡಿಬಂದಿದ್ದಾನೆ. ಚಾಲಕ ಕೋಳಿ ಅಂಗಡಿಗೆ ನುಗ್ಗಿ ರಸ್ತೆ ಬದಿ ನಿಂತಿದ್ದ ಬಸ್ಸಿಗೆ ಹಿಂತಿರುಗಿ ಓಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಕ್ಲಿಪ್ ಅನ್ನು ub1ub2 ನಿಂದ Instagram ನಲ್ಲಿ ಪೋಸ್ಟ್ ಮಾಡಲಾಗಿದೆ. ಸೌತ್‌ಹಾಲ್‌ನ ಅಂಗಡಿಯೊಂದರಲ್ಲಿ ಬಸ್ ನಿಂತಿದ್ದಾಗ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋವನ್ನು ಡಿಸೆಂಬರ್ 22 ರಂದು ಪೋಸ್ಟ್ ಮಾಡಲಾಗಿದ್ದು, ಇದುವರೆಗೆ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಥರಹೇವಾರಿ ಕಮೆಂಟ್​ಗಳು ಬರುತ್ತಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read