ಬಿಹಾರದ ಮುಜಾಫರ್ ಪುರದಲ್ಲಿ ನಡೆದ ಮದುವೆ ಸಮಾರಂಭವೊದರಲ್ಲಿ ಅನಿರೀಕ್ಷಿತವಾಗಿ ವೇದಿಕೆ ಕುಸಿದುಬಿದ್ದಿದ್ದು ಈ ವೇಳೆ ವಧು ತನ್ನ ವರ ಕೆಳಗೆ ಬೀಳದಂತೆ ರಕ್ಷಿಸಿದ್ದಾಳೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯು ಗಮನ ಸೆಳೆದಿದ್ದು ವೇದಿಕೆಯಿಂದ ಹಲವು ಮಂದಿ ನೆಲಕ್ಕೆ ಬಿದ್ದಿದ್ದಾರೆ. ಆಶ್ಚರ್ಯಕರ ರೀತಿಯಲ್ಲಿ ವಧು ತನ್ನ ವರನನ್ನು ಬೀಳದಂತೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು ಸಂಭವನೀಯ ಅಪಘಾತವನ್ನು ತಪ್ಪಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಸ್ಥಳೀಯ ಗ್ರಾಮಸ್ಥರ ಪ್ರಕಾರ, ಮುಜಫರ್‌ಪುರದ ಪಂಡಿತ್ ಪಕ್ಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮದುವೆಯ ಸಂದರ್ಭದಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ . ವೇದಿಕೆಯಲ್ಲಿ ಹೆಚ್ಚು ಜನರಿದ್ದ ಕಾರಣ ಕುಸಿದು ಬಿದ್ದಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
https://twitter.com/Sarita_sarawag/status/1782356765864284208?ref_src=twsrc%5Etfw%7Ctwcamp%5Etweetembed%7Ctwterm%5E1782356765864284208%7Ctwgr%5Ef3160b1cce5bf9d7d7fce6c3f344fc788fb1d97c%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fwatchbridesavesgroomasstagecollapsesatupwedding-newsid-n606308386