ಮದುವೆ ಮಂಟಪಕ್ಕೆ ಕುದುರೆ ಏರಿ ಕುಣಿಯುತ್ತಾ ವಧುವಿನ ಗ್ರ್ಯಾಂಡ್ ಎಂಟ್ರಿ

ಮದುವೆ ಮೆರವಣಿಗೆಯಲ್ಲಿ ವರ ಕುದುರೆ ಮೇಲೆ ಬರುವುದು ಸಾಮಾನ್ಯ. ಆದರೆ ಕಾಲ ಬದಲಾದಂತೆ ಹೊಸ ಟ್ರೆಂಡ್ ಗಳು ಮದುವೆ ಮನೆ ಅಂಗಳಕ್ಕೂ ಕಾಲಿಟ್ಟಿದ್ದು ಹೆಣ್ಮಕ್ಕಳು ನಾವೇನ್ ಕಮ್ಮಿಯಿಲ್ಲ ಅಂತ ಎಲ್ಲದರಲ್ಲೂ ತಮ್ಮನ್ನ ಗುರುತಿಸಿಕೊಳ್ತಿದ್ದಾರೆ.

ವಧು ಕುದುರೆಯೇರಿ ಸಂಭ್ರಮದಿಂದ ಮದುವೆ ಮಂಟಪಕ್ಕೆ ಬರುವ ವಿಡಿಯೋ ವೈರಲ್ ಆಗಿದೆ.
ವಧುವಿನ ಈ ವಿಶಿಷ್ಟ ಸ್ಟೈಲ್ ಎಂಟ್ರಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಸಾಮಾನ್ಯವಾಗಿ ವರ ಶೇರ್ವಾನಿ ಧರಿಸಿ ಮತ್ತು ಕುದುರೆ ಸವಾರಿ ಮಾಡುವುದನ್ನು ನಾವು ನೋಡುತ್ತೇವೆ. ಆದರೆ ಈಗ ಕಾಲ ಸಂಪೂರ್ಣ ಬದಲಾಗಿದ್ದು, ವರನ ಬದಲು ವಧು ಆಕರ್ಷಕವಾಗಿ ಮದುವೆ ಮನೆ ಪ್ರವೇಶಿಸ್ತಿದ್ದಾರೆ.

ವಧುವಿನ ಸ್ನೇಹಿತರು ಮತ್ತು ಕುಟುಂಬವು ನೃತ್ಯ ಮಾಡುತ್ತಾ ಅವಳನ್ನು ಕರೆತರುವ ವಿಶಿಷ್ಟ ಶೈಲಿಯನ್ನ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಈ ವಿಡಿಯೋವನ್ನು ಶುಭವಿವಾಹ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

https://youtu.be/s9X_v17LQQA

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read