ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ್ ರೈಲು ನಿಲ್ದಾಣದಲ್ಲಿ ರೈಲಿನಡಿ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್)ಯ ಧೈರ್ಯಶಾಲಿ ಮಹಿಳಾ ಕಾನ್‌ಸ್ಟೇಬಲ್ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿ ರಕ್ಷಿಸಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ದೃಶ್ಯದ ವಿಡಿಯೋ ವೈರಲ್ ಆಗಿದೆ.
ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ವ್ಯಕ್ತಿಯೊಬ್ಬರು ನಿಂತಿರುತ್ತಾರೆ. ರೈಲೊಂದು ಸಮೀಪಿಸುತ್ತಿದ್ದಂತೆಯೇ ಆತ ಹಠಾತ್ತನೆ ಕೆಳಗೆ ಜಿಗಿದು ರೈಲ್ವೇ ಹಳಿಗೆ ಅಡ್ಡಲಾಗಿ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇನ್ನೊಂದು ಪ್ಲಾಟ್‌ಫಾರ್ಮ್‌ನಲ್ಲಿದ್ದ ಕಾನ್‌ಸ್ಟೇಬಲ್ ಕೆ ಸುಮತಿ ಅವರು ಮಿಂಚಿನ ವೇಗದಲ್ಲಿ ಬಂದು ರೈಲು ಹಾದು ಹೋಗುವ ಒಂದು ಸೆಕೆಂಡ್ ಮೊದಲು ವ್ಯಕ್ತಿಯನ್ನು ಟ್ರ್ಯಾಕ್‌ನಿಂದ ಮೇಲಕ್ಕೆತ್ತುತ್ತಾರೆ.
ನಂತರ ಪ್ಲಾಟ್ ಫಾರ್ಮ್ ಮೇಲೆ ಇದ್ದ ಇಬ್ಬರು ವ್ಯಕ್ತಿಗಳು ಓಡಿಬಂದು ವ್ಯಕ್ತಿಯನ್ನು ಮೇಲಕ್ಕೆತ್ತಲು ಸಹಾಯ ಮಾಡುತ್ತಾರೆ.
https://twitter.com/RPF_INDIA/status/1666705743280734208?ref_src=twsrc%5Etfw%7Ctwcamp%5Etweetembed%7Ctwterm%5E1666705743280734208%7Ctwgr%5E5a22b6e5da5b261bada73b822671b500146b86aa%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findianarrative-epaper-dh0b3393acc3324eb4949737319aeb20e3%2Fwatchbraverpfwomanconstablerisksownlifetosavemanfrombeingcrushedbytrain-newsid-n508179278