ಖ್ಯಾತ ಹಿನ್ನೆಲೆ ಗಾಯಕ ಬೆನ್ನಿ ದಯಾಳ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾಡು ಹೇಳುತ್ತಿದ್ದ ವೇಳೆ ಇದನ್ನು ಸೆರೆ ಹಿಡಿಯುತ್ತಿದ್ದ ಡ್ರೋನ್ ಕ್ಯಾಮೆರಾ ನಿಯಂತ್ರಣ ತಪ್ಪಿ ಅವರ ತಲೆಗೆ ಬಡಿದಿದೆ.
ಇದರ ಪರಿಣಾಮ ಗಾಯಕ ಕೂಡಲೇ ಕುಸಿದಿದ್ದು ತಲೆ ಮತ್ತು ಬೆರಳಿಗೆ ಗಾಯವಾಗಿದೆ. ತಕ್ಷಣವೇ ಕಾರ್ಯಕ್ರಮದ ಆಯೋಜಕರು ಸೂಕ್ತ ಚಿಕಿತ್ಸೆ ಕೊಡಿಸಿದ ಪರಿಣಾಮ ಬೆನ್ನಿ ದಯಾಳ್ ಚೇತರಿಸಿಕೊಂಡಿದ್ದಾರೆ.
ಈ ಘಟನೆ ಚೆನ್ನೈನ ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದಿದ್ದು, ಬೆನ್ನಿ ದಯಾಳ್ ಕಾರ್ಯಕ್ರಮ ನೀಡಲು ಆಗಮಿಸಿದ್ದರು. ಅವರು ‘ಊರ್ವಶಿ ಊರ್ವಶಿ’ ಹಾಡನ್ನು ಹೇಳುತ್ತಿದ್ದಾಗ ನಿಯಂತ್ರಣ ತಪ್ಪಿದ ಡ್ರೋನ್ ತಲೆಗೆ ಡಿಕ್ಕಿ ಹೊಡೆದಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಗಾಯಕ ಬೆನ್ನಿ ದಯಾಳ್, ತಲೆ ಮೇಲೆ ಡ್ರೋನ್ ಕ್ಯಾಮರಗಳು ಹಾರಾಟ ನಡೆಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದಿದ್ದಾರೆ. ಅಲ್ಲದೆ ಆಯೋಜಕರ ಸ್ಪಂದನೆಯಿಂದ ತಮಗೆ ಹೆಚ್ಚಿನ ತೊಂದರೆಯಾಗಲಿಲ್ಲ ಎಂದು ತಿಳಿಸಿದ್ದಾರೆ.
https://twitter.com/fpjindia/status/1631884188491317250?ref_src=twsrc%5Etfw%7Ctwcamp%5Etweetembed%7Ctwterm%5E1631884188491317250%7Ctwgr%5Ee7fa693d2c8549926261833b8052898e42717f63%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fbollywood%2Fwatch-benny-dayal-gets-hit-by-drone-during-chennai-concert-suffers-injuries-on-head-fingers