ವಿರಾಟ್ ಕೊಹ್ಲಿಗೆ ರಾಜಸ್ಥಾನಿ ಉಡುಗೆ ತೊಡಿಸಿದ ಕಲಾವಿದ

ಕಲಾವಿದರೆಂದರೇ ಹಾಗೆ! ಅವರ ಕಲ್ಪನೆಗಳಿಗೆ ಕೊನೆ ಮೊದಲೆಂಬುದೇ ಇರೋದಿಲ್ಲ. ನಮ್ಮ ಸುಂದರ ಕಲ್ಪನೆಗಳನ್ನೆಲ್ಲಾ ಚಿತ್ರರೂಪಕ್ಕೆ ತರುವುದೇ ಕಲಾವಿದರ ಮ್ಯಾಜಿಕ್.

ಭಾರತ ಕ್ರಿಕೆಟ್ ತಂಡದ ಸದ್ಯದ ಮಟ್ಟಿಗಿನ ಅತಿ ದೊಡ್ಡ ಸ್ಟಾರ್‌ ವಿರಾಟ್ ಕೊಹ್ಲಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ತಮ್ಮ ಜಾಹೀರಾತುಗಳ ಪ್ರಾಜೆಕ್ಟ್‌ಗಳಿಗೆಂದು ಕೊಹ್ಲಿ ಥರಾವರಿ ಅವತಾರಗಳಲ್ಲಿ ಕಾಣಸಿಗುತ್ತಾರೆ.

ರಾಜಸ್ಥಾನದ ಗ್ರಾಮೀಣ ಪ್ರದೇಶದ ಗೆಟಪ್‌ನಲ್ಲಿರುವ ವಿರಾಟ್‌ ಕೊಹ್ಲಿಯ ಡಿಜಿಟಲ್ ಚಿತ್ರವೊಂದು ನೆಟ್‌ನಲ್ಲಿ ವೈರಲ್ ಆಗಿದೆ. ಜೋಧ್ಪುರ ಮೂಲದ ಕಲಾವಿದ ತೇಜು ಜಂಗಿಡ್ ಕೊಹ್ಲಿಯ ಈ ಹೊಸ ಅವತಾರದ ಚಿತ್ರ ಬಿಡಿಸಿದ್ದಾರೆ.

ದಪ್ಪನೆಯ ಮೀಸೆ ಹಾಗೂ ಗಡ್ಡದಲ್ಲಿ, ಕೈಗೊಂದು ಉದ್ದನೆಯ ಕೋಲು ಹಿಡಿದ ವಿರಾಟ್, ಕುರ್ತಾ ಪೈಜಾಮಾ ಹಾಗೂ ಪಗಡಿಯಲ್ಲಿ ಮಿಂಚುತ್ತಿರುವ ಈ ಚಿತ್ರದ ವಿಡಿಯೋ ನೆಟ್ಟಿಗರನ್ನು ಸೆಳೆದಿದ್ದು, ಅದಾಗಲೇ 2.5 ದಶಲಕ್ಷ ವೀಕ್ಷಣೆಗಳು ಹಾಗೂ 4.7 ಲಕ್ಷ ಲೈಕ್‌ಗಳನ್ನು ಗಿಟ್ಟಿಸಿದೆ.

https://youtu.be/SP40xGSAd4s

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read