ಉತ್ತರಾಖಂಡ: ಸಿಟ್ಟಿಗೆದ್ದ ಹುಲಿಯೊಂದು ಸಫಾರಿ ಜೀಪಿನ ಮೇಲೆ ಸವಾರಿ ಮಾಡುತ್ತಿದ್ದ ಪ್ರವಾಸಿಗರನ್ನು ದೂಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಸಫಾರಿ ವಾಹನದಲ್ಲಿ ಬಂದಿದ್ದ ಪ್ರವಾಸಿಗರೊಬ್ಬರು ಕ್ಯಾಮರಾದಲ್ಲಿ ಸೆರೆಹಿಡಿದು ಭಯಾನಕ ಘಟನೆಯನ್ನು ಅನುಭವಿಸಿದ್ದಾರೆ.
ಇಂಡಿಯಾ ಟುಡೇ ಗ್ರೂಪ್ ಪ್ರಕಾರ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಳಿಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಪಟ್ಟೆಯ ಸನ್ಯಾಸಿಯು ಕಿರಿಕಿರಿಗೊಳ್ಳುತ್ತಾನೆ” ಎಂದು ಅವರು ಶೀರ್ಷಿಕೆ ನೀಡಿದ್ದಾರೆ. ವಾಹನದಲ್ಲಿದ್ದ ಜನರು ಪೊದೆಗಳ ಹಿಂದೆ ಅಡಗಿಕೊಂಡಿರುವ ಹುಲಿ ನೋಡಲು ನಿಂತಿರುತ್ತಾರೆ, ಫೋಟೋ ಕ್ಲಿಕ್ಕಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ರೊಚ್ಚಿಗೆದ್ದು ಹುಲಿ ಘರ್ಜಿಸುತ್ತಾ ಬರುತ್ತದೆ.
ಸಫಾರಿ ವಾಹನದ ಚಾಲಕ ಚಾಣಾಕ್ಷ ನಡೆ ನಡೆಸಿ ಆತುರಾತುರವಾಗಿ ವಾಹನವನ್ನು ಹಿಮ್ಮುಖವಾಗಿ ಚಲಿಸಲು ಯತ್ನಿಸಿದರೂ ಹುಲಿ ಘರ್ಜನೆಯಿಂದ ಜನರು ಕೂಗಿಕೊಳ್ಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.
https://twitter.com/susantananda3/status/1651263097607454720?ref_src=twsrc%5Etfw%7Ctwcamp%5Etweetembed%7Ctwterm%5E1651263097607454720%7Ctwgr%5E89e1adc4d59582206c3922f4d7a24493f331e2ec%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-angry-tiger-roars-charges-tourists-who-went-on-a-safari-ride-video-goes-viral