ನಿಷೇಧಾಜ್ಞೆಯ ನಡುವೆಯೂ ತನ್ನ ಕರ್ತವ್ಯ ಮುಂದುವರೆಸಿದ ಅಮೇಜ಼ಾನ್ ಉದ್ಯೋಗಿಯೊಬ್ಬರು ಉತ್ತರ ಕರೋಲಿನಾದ ಮನೆಯೊಂದಕ್ಕೆ ಪ್ಯಾಕೇಜ್ ಒಂದನ್ನು ಡೆಲಿವರಿ ಮಾಡಿ ಬಂದಿದ್ದಾರೆ.
ಘಟನೆಯ ವಿಡಿಯೋ ಭಾರೀ ವೈರಲ್ ಆಗಿದ್ದು, ಅಮೆರಿಕದ ಎಲ್ಲ ದೊಡ್ಡ ಮಾಧ್ಯಮಗಳಲ್ಲೂ ಸುದ್ದಿಯಾಗಿದೆ.
“ನಿಮ್ಮ ಕೆಲಸದಲ್ಲಿ ನೀವು ಬದ್ಧರಾಗಿದ್ದರೆ……. ನಿಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ,” ಎಂದು ಈ ವಿಡಿಯೋ ಕ್ಲಿಪ್‌ಗೆ ಕ್ಯಾಪ್ಷನ್ ಹಾಕಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಪೊಲೀಸರು ನಿಯೋಜನೆಗೊಂಡಿದ್ದ ಪ್ರದೇಶದಲ್ಲೂ ಸಹ ಅಮೇಜ಼ಾನ್ ಡೆಲಿವರಿ ಚಾಲಕ ಏನೂ ಆಗಿಯೇ ಇಲ್ಲವೆಂಬಂತೆ ಬಂದು ವಸತಿ ಸಮುಚ್ಛಯವೊಂದರಲ್ಲಿದ್ದ ಸದಸ್ಯರೊಬ್ಬರಿಗೆ ಪ್ಯಾಕೇಜ್ ತಲುಪಿಸಿದ್ದಾನೆ.
“ನಿಷೇಧಾಜ್ಞೆಯ ನಡುವೆಯೂ ಆತ ಪ್ಯಾಕೇಜ್ ಡೆಲಿವರಿ ಮಾಡಲು ಹೊರಟಿದ್ದಾನೆ. ಏನೇ ಆಗಲಿ ನಾನು ಬಿಟ್ಟುಕೊಡುವುದಿಲ್ಲ….. ಗೋ ಅಮೇಜ಼ಾನ್…… ಓ ಮೈ ಗಾಡ್,” ಎಂದು ವಿಡಿಯೋ ರೆಕಾರ್ಡ್ ಮಾಡಿದಾತ ನಗುತ್ತಾ ಹೇಳುತ್ತಿರುವುದನ್ನು ಸಹ ವಿಡಿಯೋದಲ್ಲಿ ಕೇಳಬಹುದಾಗಿದೆ.
https://twitter.com/realaustinzone/status/1637280276416983041?ref_src=twsrc%5Etfw%7Ctwcamp%5Etweetembed%7Ctwterm%5E1637280276416983041%7Ctwgr%5E6962625a952f821251efd72229d2ee9f423d459b%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-amazon-executive-delivers-package-during-police-standoff-in-us-3887481