ಚಿತ್ರೀಕರಣ ವೇಳೆ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ನಟ ವಿಶಾಲ್

ನಟ ವಿಶಾಲ್ ಅವರು ಚಿತ್ರೀಕರಣ ಸಂದರ್ಭದಲ್ಲಿ ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಶೂಟಿಂಗ್ ವೇಳೆ ನೆಲದ ಮೇಲೆ ಅವರು ಮಲಗಿದ್ದು, ಪಕ್ಕದಲ್ಲೇ ಟ್ರಕ್ ಹಾದು ಹೋಗಿದೆ. ಅದೃಷ್ಟವಶಾತ್ ವಿಶಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ಮಾರ್ಕ್ ಆಂಟೋನಿ’ ಸೆಟ್‌ನಲ್ಲಿ ವೇಗವಾಗಿ ಬಂದ ಟ್ರಕ್‌ನಿಂದ ವಿಶಾಲ್ ತಪ್ಪಿಸಿಕೊಂಡಿದ್ದಾರೆ. ಕೆಲವೇ ಸೆಕೆಂಡುಗಳು ಮತ್ತು ಕೆಲವು ಇಂಚುಗಳಲ್ಲಿ ನನ್ನ ಜೀವನವನ್ನು ಉಳಿಸಿಕೊಂಡೆ. ಸರ್ವಶಕ್ತನಿಗೆ ಧನ್ಯವಾದಗಳು. ಈ ಘಟನೆಯಿಂದ ನಡುಕವಾದರೂ ಚಿತ್ರೀಕರಣಕ್ಕೆ ಹಿಂತಿರುಗಿದೆ ಎಂದು ವಿಶಾಲ್ ಹೇಳಿದ್ದಾರೆ.

ಚಿತ್ರೀಕರಣದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ವೇಗವಾಗಿ ನುಗ್ಗಿದೆ. ನೆಲದ ಮೇಲೆ ಮಲಗಿದ್ದ ವಿಶಾಲ್ ಪಾರಾಗಿದ್ದು, ಸುತ್ತಲೂ ಇದ್ದ ಕಿರಿಯ ಕಲಾವಿದರು ಕೂಡ ಅಪ್ಪಳಿಸಲು ಬಂದಿದ್ದ ವಾಹನದಿಂದ ಅದೃಷ್ಟವಶಾತ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಾಂತ್ರಿಕ ದೋಷದಿಂದ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಈ ವಿಡಿಯೋ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ.

https://twitter.com/VishalKOfficial/status/1628369227693580290

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read