ಪ್ರಪಂಚದಾದ್ಯಂತದ ಜನರು ಇದುವರೆಗೆ ಕೆಲವು ಅಸಾಮಾನ್ಯ ವಿಶ್ವ ದಾಖಲೆಗಳನ್ನು ಸ್ಥಾಪಿಸಿದ್ದಾರೆ. ದಾಖಲೆಗಳು ಯಾವುದೂ ಹೊಸತು ಸಿಗದಿದ್ದರೆ, ಹಳೆಯ ದಾಖಲೆಗಳನ್ನೇ ಮತ್ತೊಮ್ಮೆ ಪರಿಶೀಲಿಸಿ ಆ ದಾಖಲೆ ಮುರಿಯಬಹುದೇ ಎಂದು ಯೋಚನೆಯಲ್ಲಿ ತೊಡಗುತ್ತಾರೆ.
ಅಂಥದ್ದೇ ಒಂದು ವಿಶ್ವ ದಾಖಲೆಯನ್ನು ಬರೆದಿದೆ ಹಂಗೇರಿಯ ಫೇಸ್ ಟೀಮ್ ಅಕ್ರೋಬ್ಯಾಟಿಕ್ ಸ್ಪೋರ್ಟ್ಸ್ ಥಿಯೇಟರ್. ಬರಾನಿ ಫ್ಲಿಪ್ ಬೌನ್ಸ್-ಪಾಸ್ ರಿಲೇ ಆಟದಲ್ಲಿ ಹೊಸ ದಾಖಲೆಯನ್ನು ಈ ತಂಡ ಬರೆದಿದೆ. ಈ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದೆ.
2020ರ ಆಗಸ್ಟ್ 10ರಂದು ಒಟ್ಟು ಮೂವತ್ತೈದು ಜನರು ಈ ದಾಖಲೆಯನ್ನು ಸ್ಥಾಪಿಸಿದ್ದು ಅದೀಗ ವೈರಲ್ ಆಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ದಾಖಲೆಯ ಬಗ್ಗೆ ಶೇರ್ ಮಾಡಿಕೊಂಡಿದೆ. ಬಾಸ್ಕೆಟ್‌ಬಾಲ್ ನೆಟ್ ಸಮೀಪ ಜಿಮ್ ಮ್ಯಾಟ್ ಅಳವಡಿಸಲಾಗಿದೆ. ಈ ಮ್ಯಾಟ್ಗೆ ರೀಚ್ ಆಗುವ ಮೊದಲು ಆಟಗಾರರು ಹೇಗೆಲ್ಲಾ ಸರ್ಕಸ್ ಮಾಡುತ್ತಾರೆ ಎಂಬ ಬಗ್ಗೆ ವಿಶೇಷವಾಗಿ ಈ ವಿಡಿಯೋದಲ್ಲಿ ತೋರಿಸಲಾಗಿದೆ. ಇದನ್ನು ನೋಡಿ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.
https://twitter.com/GWR/status/1624430055131607041?ref_src=twsrc%5Etfw%7Ctwcamp%5Etweetembed%7Ctwterm%5E1624430055131607041%7Ctwgr%5Ea21f739fdeda6438e957ddb1650f3de9d69150e0%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-acrobatic-teams-stellar-barani-flip-breaks-world-record-7082467.html
https://twitter.com/Jeffssentongo/status/1624433061013213185?ref_src=twsrc%5Etfw%7Ctwcamp%5Etweetembed%7Ctwterm%5E1624433061013213185%7Ctwgr%5Ea21f739fdeda6438e957ddb1650f3de9d69150e0%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-acrobatic-teams-stellar-barani-flip-breaks-world-record-7082467.html
https://twitter.com/GWR/status/1624430055131607041?ref_src=twsrc%5Etfw%7Ctwcamp%5Etweetembed%7Ctwterm