Video | ನಿಸ್ಸಾನ್ 1 ಟನ್ ಚಾಲನೆ ಮಾಡಿದ ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌

ಸೂಪರ್‌ ಲಕ್ಸೂರಿ ವಾಹನ ನಿಸ್ಸಾನ್‌ 1 ಟನ್ ಚಾಲನೆ ಮಾಡಿದ ಕ್ರಿಕೆಟಿಗ ಸೂರ್ಯ ಕುಮಾರ್‌ ಯಾದವ್‌ ಈ ಬಗ್ಗೆ ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆಯುವ ಸ್ಪಷ್ಟೀಕರಣ ನೀಡಿದ್ದಾರೆ.

ಸಂಪೂರ್ಣ ಮರು ನಿರ್ಮಾಣ ಕಂಡ ಈ ಕಾರು ತಮ್ಮದೋ ಅಲ್ಲವೋ ಎಂದು ಸ್ಪಷ್ಟ ಪಡಿಸಲು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಸೂರ್ಯ ಕುಮಾರ್‌, “ಸಾರಿ ಗಾಯ್ಸ್‌. ಈ ಕಾರು ಈಗ ನನ್ನದಾಗಿ ಉಳಿದಿಲ್ಲ. ಇದನ್ನು ಕಂಡಾಗ ನನ್ನನ್ನು ಟ್ಯಾಗ್ ಮಾಡಬೇಡಿ,” ಎಂದಿದ್ದಾರೆ. “ಆದರೆ, ಕ್ರೇಜ಼ಿಯಾದ ವಿಚಾರವೊಂದಕ್ಕೆ ಕಾಯುತ್ತಿರಿ,” ಎಂದು ಇದೇ ವೇಳೆ ಅಭಿಮಾನಿಗಳಿಗೆ ತಿಳಿಸಿದ್ದಾರೆ ಯಾದವ್‌.

1960ರ ದಶಕದಲ್ಲಿ ಬಹಳ ಜನಪ್ರಿಯವಾಗಿದ್ದ ನಿಸ್ಸಾನ್ 1 ಟನ್ ಅನ್ನು ಭಾರತೀಯ ಸೇನೆಯಲ್ಲಿ ಬಳಸಲಾಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಮಹಿಂದ್ರಾ ಜೀಪುಗಳು ಈ ವಾಹವನ್ನು ಹಿಂದಕ್ಕೆ ಸರಿಸಿದವು. ಇದೇ ಫೆಬ್ರವರಿಯಲ್ಲಿ ತಮ್ಮ ನಿಸ್ಸಾನ್ 1 ಟನ್‌ ಕಾರಿನೊಂದಿಗೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಸೂರ್ಯ ಕುಮಾರ್‌, ಅದನ್ನು ತಮ್ಮ ಹೊಸ ಆಟಿಕೆ ಎಂದಿದ್ದರು

ತಮ್ಮ ಈ 1 ಟನ್ ಕಾರಿಗೆ ಬಣ್ಣ, ಗಾಜಿನ ಪ್ಯಾನೆಲ್‌ಗಳು, ಗ್ರಿಲ್, ಹೆಡ್‌ಲ್ಯಾಂಪ್ ಕವರ್‌ಗಳು ಸೇರಿದಂತೆ ಸಂಪೂರ್ಣವಾದ ಮರುವಿನ್ಯಾಸ ಮಾಡಿಸಿದ್ದರು ಸೂರ್ಯ.

ಟೀಂ ಇಂಡಿಯಾದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಸಹ ಇಂಥದ್ದೇ ವಾಹನವನ್ನು ಹೊಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read