ಎ‌ಚ್ಚರ: ಮಾನಸಿಕ ಆರೋಗ್ಯ ಹಾಳುಮಾಡುತ್ತವೆ ಈ ಆಹಾರ…!

ಆರೋಗ್ಯಕರ ಆಹಾರ ಸೇವಿಸಿದ್ರೆ ರೋಗಗಳು ನಮ್ಮಿಂದ ದೂರ ಓಡುತ್ತವೆ. ಕೆಲವೊಂದು ನಿರ್ದಿಷ್ಟ ಆಹಾರಗಳ ಸೇವನೆಯಿಂದ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮವಾಗುತ್ತದೆ. ಇವು  ಮಾನಸಿಕ ಆರೋಗ್ಯವನ್ನು ನೇರವಾಗಿ ಹಾಳು ಮಾಡುತ್ತವೆ. ಹಾಗಾಗಿ ಮಾನಸಿಕ ಆರೋಗ್ಯ ಕೆಡಿಸುವ ಆಹಾರಗಳನ್ನು ಸೇವಿಸಲೇಬಾರದು.

ಮಾನಸಿಕ ಆರೋಗ್ಯ ಚೆನ್ನಾಗಿರಬೇಕೆಂದರೆ ಸಿಹಿ ತಿನಿಸುಗಳಿಂದ  ದೂರವಿರಬೇಕು. ಅತಿಯಾಗಿ ಸಿಹಿ ತಿನ್ನುವುದರಿಂದ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.

ಕೆಫೀನ್ ದೇಹಕ್ಕೆ ಒಳ್ಳೆಯದಲ್ಲ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಕೆಫೀನ್‌ ಸೇವನೆಯಿಂದ ಆತಂಕ ಮತ್ತು ಖಿನ್ನತೆ ಕೂಡ ಉಂಟಾಗಬಹುದು.

ಹೆಚ್ಚಿನ ಕೊಬ್ಬಿನಂಶಗಳಿರುವ ಆಹಾರಗಳಿಂದ ದೂರವಿರಬೇಕು. ಇದು ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ. ಪರಿಣಾಮ ಮೆದುಳಿನ ನರಗಳೂ ದುರ್ಬಲವಾಗುತ್ತವೆ. ಮಾನಸಿಕ ಆರೋಗ್ಯಕ್ಕೆ ಇದು ಮಾರಕ.

ಮದ್ಯಪಾನ ಮಾಡಬಾರದು. ಅಲ್ಕೋಹಾಲ್‌ ಸೇವನೆಯಿಂದ ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಸಂಸ್ಕರಿಸಿದ ಆಹಾರಗಳು ಕೂಡ ದೇಹ ಮತ್ತು ಮೆದುಳಿನಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ. ಇವುಗಳ ಸೇವನೆಯಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read