ಎಚ್ಚರ: ಫಿಶ್‌ ಸ್ಪಾದಿಂದ ಬರಬಹುದು ಏಡ್ಸ್‌ನಂತಹ ಭಯಾನಕ ಕಾಯಿಲೆ…!

ಸುಂದರವಾಗಿ ಕಾಣಲು ಎಲ್ಲರೂ ಇಷ್ಟಪಡುತ್ತಾರೆ. ಅದಕ್ಕಾಗಿ ಸಾಕಷ್ಟು ಬ್ಯೂಟಿ ಟ್ರೀಟ್ಮೆಂಟ್‌ಗಳನ್ನೂ ಪಡೆಯುತ್ತಾರೆ. ಅವುಗಳಲ್ಲಿ ಒಂದಾದ ಫಿಶ್‌ ಸ್ಪಾ ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ನಲ್ಲಿದೆ, ಸಾವಿರಾರು ರೂಪಾಯಿ ಖರ್ಚು ಮಾಡಿ ಫಿಶ್ ಸ್ಪಾ ಪಡೆಯುತ್ತಾರೆ. ಮಾಲ್‌, ಸ್ಪಾ ಸೆಂಟರ್‌ ಹೀಗೆ ಎಲ್ಲಾ ಕಡೆಗಳಲ್ಲಿ ಇದು ಲಭ್ಯವಿದೆ. ಫಿಶ್ ಪೆಡಿಕ್ಯೂರ್ ಒಂದು ರೀತಿಯ ಮಸಾಜ್. ಅದು ಮಾನಸಿಕವಾಗಿ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಆದರೆ ಫಿಶ್‌ ಸ್ಪಾದಿಂದ ಗಂಭೀರ ಕಾಯಿಲೆಗೆ ತುತ್ತಾಗುವ ಅಪಾಯವಿದೆ.

ಏಡ್ಸ್‌ನಂತಹ ಮಾರಕ ಕಾಯಿಲೆ – ಫಿಶ್ ಸ್ಪಾ ಮಾಡಿಸಿಕೊಳ್ಳುವುದರಿಂದ ಏಡ್ಸ್ ನಂತಹ ಅಪಾಯಕಾರಿ ಕಾಯಿಲೆಗಳಿಗೆ ಗುರಿಯಾಗಬಹುದು. ಏಕೆಂದರೆ ಕೆಲವೊಮ್ಮೆ ಮೀನುಗಳು ಈ ರೋಗಕ್ಕೆ ತುತ್ತಾಗುತ್ತವೆ. ಅವು ವ್ಯಕ್ತಿಯನ್ನು ಕಚ್ಚಿದಾಗ ಆತನಿಗೂ ಸೋಂಕು ತಗುಲುತ್ತದೆ.

ಚರ್ಮದ ಸೋಂಕಿನ ಸಮಸ್ಯೆ – ಫಿಶ್ ಸ್ಪಾದಿಂದ ಚರ್ಮದ ಸೋಂಕಿನ ಸಮಸ್ಯೆಯನ್ನು ಎದುರಿಸಬಹುದು. ಏಕೆಂದರೆ ತೊಟ್ಟಿಯಲ್ಲಿ ಇರುವ ಮೀನುಗಳು ಅನೇಕ ರೋಗಗಳಿಂದ ಬಳಲುತ್ತವೆ. ನೀವು ಈ ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬಂದರೆ ಸಮಸ್ಯೆಗಳಾಗಬಹುದು. ಪ್ರತಿ ತಿಂಗಳು ಫಿಶ್ ಸ್ಪಾ ತೆಗೆದುಕೊಳ್ಳುವ ಅಭ್ಯಾಸವಿದ್ದರೆ ಅದನ್ನು ಬಿಟ್ಟುಬಿಡಿ.

ಸ್ಕಿನ್ ಟೋನ್ ಹಾಳಾಗುತ್ತದೆ- ಫಿಶ್ ಸ್ಪಾ ನಿಮ್ಮ ಚರ್ಮದ ಟೋನ್ ಅನ್ನು ಹಾಳು ಮಾಡುತ್ತದೆ. ಆದ್ದರಿಂದ ಫಿಶ್ ಸ್ಪಾ ಮಾಡಿಸಿಕೊಳ್ಳುವ ಮುನ್ನ ಜಾಗರೂಕರಾಗಿರಬೇಕು. ಏಕೆಂದರೆ ಈ ಕಾರಣದಿಂದಾಗಿ ಚರ್ಮವು ಮಂದ ಮತ್ತು ಒರಟಾಗಬಹುದು.

ಉಗುರುಗಳಿಗೆ ಹಾನಿ – ಫಿಶ್ ಸ್ಪಾ ಸಮಯದಲ್ಲಿ ಉಗುರುಗಳು ಹಾನಿಗೊಳಗಾಗುತ್ತವೆ. ಏಕೆಂದರೆ ಸ್ಪಾ ಸಮಯದಲ್ಲಿ ಮೀನುಗಳು ನಮ್ಮ ಉಗುರುಗಳನ್ನು ಕಚ್ಚುತ್ತವೆ. ಇದರಿಂದಾಗಿ ಉಗುರುಗಳು ಹಾಳಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read