BREAKING: ವಕ್ಪ್ ಬಗ್ಗೆ ವದಂತಿ ಹಬ್ಬಿಸಿ ಅಲ್ಪಸಂಖ್ಯಾತರ ಭಯಬೀಳಿಸಿ ದೇಶ ಇಬ್ಭಾಗಕ್ಕೆ ಯತ್ನ: ವಿಪಕ್ಷಗಳ ವಿರುದ್ಧ ಅಮಿತ್ ಶಾ ಗಂಭೀರ ಆರೋಪ

ನವದೆಹಲಿ: ಸರ್ಕಾರಿ ಸಂಪತ್ತು ದಾನ ಮಾಡುವುದಕ್ಕೆ ನಾವು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಲೋಕಸಭೆಯಲ್ಲಿ ವಕ್ಪ್ ತಿದ್ದುಪಡಿ ಕುರಿತಾಗಿ ಮಾತನಾಡಿದ ಅವರು, ವಕ್ಫ್ ತಿದ್ದುಪಡಿ ವಿಧೇಯಕದ ಬಗ್ಗೆ ವಿದ್ಪಕ್ಷಗಳು ವದಂತಿ ಹಬ್ಬಿಸುತ್ತಿದೆ. 1995 ರಿಂದಲೂ ವಕ್ಫ್ ಪರಿಷತ್ ಮತ್ತು ವಕ್ಫ್ ಬೋರ್ಡ್ ಇವೆ. ವೋಟ್ ಬ್ಯಾಂಕ್ ಗಾಗಿ ವಿಪಕ್ಷಗಳು ಈ ಮಸೂದೆಗೆ ವಿರೋಧ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಪ್ರತಿಪಕ್ಷಗಳು ಸುಳ್ಳು ವದಂತಿ ಹಬ್ಬಿಸಿ ಅಲ್ಪಸಂಖ್ಯಾತರನ್ನು ಭಯ ಬೀಳಿಸುತ್ತಿದ್ದಾರೆ ಎಂದು ಟೀಕಿಸಿದ ಅಮಿತ್ ಶಾ, ಸುಳ್ಳು ವದಂತಿ ಹಬ್ಬಿಸಿ ಅಲ್ಪಸಂಖ್ಯಾತರನ್ನು ಭಯ ಬೀಳಿಸುತ್ತಿದ್ದಾರೆ ವಿರೋಧ ಪಕ್ಷಗಳು ದೇಶವನ್ನು ಇಬ್ಬಾಗಿಸುವ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಯುಪಿಎ ಸರ್ಕಾರ ವಕ್ಫ್ ಮಂಡಳಿಗೆ ಎಲ್ಲಾ ರಾಜ್ಯಗಳಲ್ಲಿಯೂ ಸರ್ಕಾರಿ ಆಸ್ತಿಯನ್ನು ಕೊಟ್ಟಿದೆ. ವಿಜಯಪುರ ಜಿಲ್ಲೆಯಲ್ಲಿ ರೈತರ ಆಸ್ತಿಯನ್ನು ವಕ್ಫ್ ಕಬಳಿಸಿದೆ. ತಮಿಳುನಾಡಿನಲ್ಲಿ ದೇವಾಲಯದ ಭೂಮಿಯನ್ನು ವಕ್ಫ್ ಮಂಡಳಿಗೆ ಹಂಚಿಕೆ ಮಾಡಲಾಗಿದೆ. 1,500 ವರ್ಷಗಳ ಪುರಾತನ ದೇವಾಲಯದ ಭೂಮಿಯನ್ನು ವಕ್ಫ್ ಮಂಡಳಿಗೆ ನೀಡಿದ್ದು, ಈಸಾಯಿ ಸಮುದಾಯದ ಜಮೀನು ಕಬಳಿಸಲಾಗಿದೆ. ವಕ್ಫ್ ತಿದ್ದುಪಡಿ ಮಸೂದೆಯನ್ನು ಈಸಾಯಿ ಸಮುದಾಯ ಸ್ವಾಗತಿಸಿದೆ ಎಂದರು.

ಪ್ರಯಾಗ್ ರಾಜ್ ನಲ್ಲೂ ವಕ್ಫ್ ಬೋರ್ಡ್ ಗೆ ಆಸ್ತಿ ಕೊಟ್ಟಿದ್ದಾರೆ. ದೆಹಲಿಯಲ್ಲಿ ರೈಲ್ವೆ ಇಲಾಖೆ ಜಮೀನನ್ನು ವಕ್ಫ್ ಮಂಡಳಿಗೆ ಕೊಟ್ಟಿದ್ದಾರೆ. ಯುಪಿಎ ಸರ್ಕಾರ ವಕ್ಫ್ ಮಂಡಳಿಗೆ ಆಸ್ತಿ ನೀಡಿದೆ. ಎಲ್ಲಾ ರಾಜ್ಯಗಳಲ್ಲಿಯೂ ವಕ್ಫ್ ಸರ್ಕಾರಿ ಆಸ್ತಿಯನ್ನು ಕಬಳಿಸಿದೆ. ವಕ್ಫ್ ಮಂಡಳಿ ಹಣ ಬಡ ಮುಸ್ಲಿಮರಿಗಾಗಿ ಖರ್ಚು ಮಾಡಲಿ. ಭ್ರಷ್ಟಾಚಾರಿಗಳ ವಿರುದ್ಧ ನಮ್ಮ ಕಾರ್ಯಾಚರಣೆ ಮುಂದುವರೆಯಲಿದೆ. ಜನರ ಕಲ್ಯಾಣಕ್ಕಾಗಿ ಕಾನೂನು ಜಾರಿಗೊಳಿಸುತ್ತೇವೆ ಎಂದು ಲೋಕಸಭೆಯಲ್ಲಿ ವಿಪಕ್ಷಗಳಿಗೆ ಅಮಿತ್ ಶಾ ತಿರುಗೇಟು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read