ರಿಟರ್ನ್ ಗಿಫ್ಟ್ ಕೊಡಬೇಕಾ…..? ಇಲ್ಲಿದೆ ಕೆಲವು ಟಿಪ್ಸ್

ಗಿಫ್ಟ್ ಏನು ಕೊಡಲಿ? | udayavani

ಗಿಫ್ಟ್ ಆಯ್ಕೆ ಮಾಡುವುದಕ್ಕಿಂತ, ರಿಟರ್ನ್ ಗಿಫ್ಟ್ ಆಯ್ಕೆ ಮಾಡುವುದು ಕಷ್ಟ. ಗಿಫ್ಟ್ ಕೊಡುವಾಗ ಕೇವಲ ಒಬ್ಬರನ್ನೇ ಗಮನದಲ್ಲಿ ಇಟ್ಟುಕೊಂಡು ಉಡುಗೊರೆಯನ್ನು ಆಯ್ಕೆ ಮಾಡುತ್ತೇವೆ. ನಾವು ಯಾರಿಗೆ ಉಡುಗೊರೆ ಕೊಡಲು ಹೊರಟಿದ್ದೇವೆ ಅವರ ಬಗ್ಗೆ ಹೆಚ್ಚು ಕಡಿಮೆ ನಮಗೆ ಸಾಕಷ್ಟು ವಿಷಯಗಳು ತಿಳಿದೆ ಇರುತ್ತದೆ. ಸಂದರ್ಭ, ಅಭಿರುಚಿ ಹಾಗೂ ಅಗತ್ಯವನ್ನು ಗಮನದಲ್ಲಿ ಇಟ್ಟುಕೊಂಡು ಗಿಫ್ಟ್ ಆಯ್ಕೆ ಮಾಡಿಬಿಡಬಹುದು.

ಆದರೆ ರಿಟರ್ನ್ ಗಿಫ್ಟ್ ವಿಷಯ ಹಾಗಲ್ಲ. ಒಮ್ಮೆಲೆ 50-100 ಜನರಿಗೆ ರಿಟರ್ನ್ ಗಿಫ್ಟ್ ಕೊಡಬೇಕಾಗುತ್ತದೆ. ಇಲ್ಲಿ ಒಟ್ಟಿಗೆ ರಿಟರ್ನ್ ಗಿಫ್ಟ್ ಖರೀದಿಸುವುದರಿಂದ ಬಡ್ಜೆಟ್ ಬಹಳ ಮುಖ್ಯ. ಎಷ್ಟು ಜನರಿಗೆ ಗಿಫ್ಟ್ ಕೊಡುತ್ತಿದ್ದೇವೆಯೋ ಅಷ್ಟು ಜನರಿಗೆ ಇಷ್ಟವಾಗುವಂತಹ, ಉಪಯೋಗವಾಗುವಂತಹ ಉಡುಗೊರೆಯನ್ನು ಆಯ್ಕೆ ಮಾಡಬೇಕು.

ಹೆಚ್ಚಾಗಿ ಹೆಣ್ಣುಮಕ್ಕಳಿಗೆ ರಿಟರ್ನ್ ಗಿಫ್ಟ್ ಕೊಡುವುದರಿಂದ ಸಗಟು ದರದಲ್ಲಿ ಒಮ್ಮೆಲೆ ಉಪಯುಕ್ತ ವಸ್ತುಗಳನ್ನು ಖರೀದಿ ಮಾಡುವುದು ಒಳ್ಳೆಯದು.
ನಿಮಗೆ ಗೊತ್ತಿರುವ ನುರಿತ ಕರಕುಶಲ ಕಲಾವಿದರಿಗೆ ನೀವೇ ನೇರವಾಗಿ ಆರ್ಡರ್ ಕೊಡಬಹುದು. ಇದರಿಂದ ಆ ಕಲಾವಿದರಿಗೆ ಉತ್ತೇಜನ, ಆದಾಯ ದೊರೆತ ಹಾಗೂ ಆಗುತ್ತದೆ ಅಲ್ಲದೇ, ಮಾರುಕಟ್ಟೆಯಲ್ಲಿ ಅನಗತ್ಯ ಟ್ಯಾಕ್ಸ್ ಗಳನ್ನು ಭರಿಸುವುದು ತಪ್ಪಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read