ದಟ್ಟವಾದ ಕೂದಲು ಪಡೆಯಬೇಕಾ….? ಹೀಗೆ ಮಾಡಿ

ನಿಮ್ಮ ಕೂದಲು ಉದುರುವ ಸಮಸ್ಯೆಗೆ ಹಲವು ಪ್ರಯೋಗಗಳನ್ನು ಮಾಡಿ ಸೋತು ಕೈಚೆಲ್ಲಿದ್ದೀರೇ? ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ ನೋಡಿ.

ಒಂದು ಕಪ್ ಅಲೋವೆರಾ ಜೆಲ್ಗೆ ಮೂರನೆಯ ಒಂದು ಭಾಗದಷ್ಟು ಮೆಂತೆ ಪುಡಿ ಸೇರಿಸಿ ಚೆನ್ನಾಗಿ ಕಲಕಿ. ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿ. ಒಂದು ಗಂಟೆ ಬಳಿಕ ತೊಳೆಯಿರಿ. ಅಲೋವೇರಾ ನಿಮ್ಮ ಕೂದಲನ್ನು ಪೋಷಿಸಿ ರಕ್ಷಿಸುತ್ತದೆ ಮತ್ತು ಕೂದಲನ್ನು ಬೆಳೆಯಲು ಬಿಡುತ್ತದೆ.

ನೆಲ್ಲಿಕಾಯಿ ಪುಡಿ, ಗೋರಂಟಿ ಪುಡಿ ಮತ್ತು ಬ್ರಾಹ್ಮಿ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಅದಕ್ಕೆ ಮೊಸರು ಬೆರೆಸಿ ಪೇಸ್ಟ್ ತಯಾರಿಸಿ. ಮೊದಲು ಕೂದಲಿನ ಬುಡಕ್ಕೆ ನಿಂಬೆ ಮತ್ತು ನೆಲ್ಲಿಕಾಯಿ ರಸವನ್ನು ಹಚ್ಚಿ 20 ನಿಮಿಷದ ಬಳಿಕ ಈ ಪೇಸ್ಟನ್ನು ಹಚ್ಚಿ. ಎರಡು ಗಂಟೆಗಳ ಕಾಲ ಒಣಗಲು ಬಿಡಿ. ಬಳಿಕ ತೊಳೆಯಿರಿ.

ನೆಲ್ಲಿಕಾಯಿ ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಖನಿಜಗಳು ಹೇರಳವಾಗಿವೆ. ನಿತ್ಯ ನೀವು ಸೇವಿಸುವ ಆಹಾರದಲ್ಲಿ ಎಳ್ಳಿಗೂ ಜಾಗ ನೀಡುವುದರಿಂದ ಕೂದಲಿನ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read