ಟ್ರಾಫಿಕ್ ಅಂದ್ರೆ ಎಷ್ಟು ಕಿರಿಕಿರಿ ಅನ್ನೋದು ವಾಹನ ಓಡಿಸೋರಿಗೆ ಚೆನ್ನಾಗಿ ಗೊತ್ತು. ಅದರಲ್ಲೂ ಬೆಂಗಳೂರು ಟ್ರಾಫಿಕ್ ವಿಶ್ವ ವಿಖ್ಯಾತವಾಗಿದೆ. ಆದರೆ ಈಗ ಟ್ರಾಫಿಕ್‌ನಿಂದ ಬಚಾವ್ ಆಗಲು ಹೊಸ ಟೆಕ್ನಿಕ್ ಒಂದನ್ನ ಕಂಡು ಹಿಡಿಯಲಾಗಿದೆ. ಅದರ ಹೆಸರು ‘ರೌಂಡ್ ಅಬೌಟ್ ಸೈನ್‌ಶಾಟ್ ಈಗ ಟಿಕ್‌ಟಾಕರ್ ಒರ್ವರು ವಿಡಿಯೋ ಒಂದನ್ನ ಅಪ್‌ಲೋಡ್ ಮಾಡಿ ಟ್ರಾಫಿಕ್ ಸಮಸ್ಯೆಗೆ ಪರಿಹಾರವೊಂದನ್ನ ಒದಗಿಸಿದ್ದಾರೆ.
‘ರೌಂಡ್’ ಅಬೌಟ್ ಸೈನ್‌ಶಾಟ್ʼ ಸರ್ಕಲ್ ರೂಪದ ರಸ್ತೆಯಾಗಿದ್ದು, ವಾಹನ ಚಾಲಕ ವೃತ್ತಾಕಾರದಲ್ಲಿ ಸುತ್ತು ಹಾಕುತ್ತಾ ಟ್ರಾಫಿಕ್ ಸಮಸ್ಯೆ ಇಲ್ಲದೇನೇ ಸಾಗಬಹುದು ಅನ್ನೋದಕ್ಕೆ ಸಾಕ್ಷಿಯಾಗಿದೆ. ಆದರೆ ಈ ಟಿಕ್ ಟಾಕರ್ ತಮ್ಮ ಕಾರಿನಲ್ಲಿದ್ದ ಡ್ಯಾಶ್ ಕಾಮರಾದ ಸಹಾಯದಿಂದ, ವೃತ್ತಾಕಾರದ ರಸ್ತೆಯಲ್ಲಿ ಚಲಿಸುತ್ತಿರುವ ವಾಹನಗಳ ದೃಶ್ಯವನ್ನ ರೆಕಾರ್ಡ್ ಮಾಡಿದ್ದಾರೆ. ಈ ಕ್ಯಾಮರಾದಲ್ಲಿ ರಸ್ತೆಯಲ್ಲಿ ಬಲದಿಕ್ಕಿನಿಂದ ಟ್ರಾಫಿಕ್ ಸಮಸ್ಯೆಗೆ ಒಳಗಾಗದೇ ವಾಹನಗಳು ಹೇಗೆ ಚಲಿಸುತ್ತಿವೆ ಅನ್ನೋದನ್ನ ನೋಡಬಹುದು.
ಅದೊಂದು ವಾಹನ ದಟ್ಟಣೆಯಿಂದ ಕೂಡಿದ ರಸ್ತೆ. ಅಲ್ಲಿ ಕೆಲ ವಾಹನಗಳು ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಹೋಗುವುದಕ್ಕೆ ಕಷ್ಟಪಡುತ್ತಿದ್ದವು. ಆಗ ವಾಹನಗಳು ಆ ವೃತ್ತಾಕಾರದ ರಸ್ತೆಯಲ್ಲಿ ಬಲಬದಿಯಿಂದ ಒಂದರ ಹಿಂದೆ ಬಂದು ಆ ವೃತ್ತಾಕಾರ ರಸ್ತೆ ಸುತ್ತು ಹಾಕ್ತಾ ಹಾಕ್ತಾ ರಸ್ತೆಯನ್ನ ದಾಟಿದ್ದವು. ಅಸಲಿಗೆ ಈ ಒಂದು ರಸ್ತೆಯನ್ನು ಇಂಗ್ಲೆಂಡ್‌ನ ಮಹಾರಾಣಿಯಾಗಿದ್ದ ಎರಡನೇ ಎಲಿಜಬೆತ್ ಅವರ ಶವಸಂಸ್ಕಾರದ ಸಮಯದಲ್ಲಿ ತಯಾರಿಸಲಾಗಿತ್ತು. ಈಗ ಇದೇ ರಸ್ತೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಸಿಗುವಂತೆ ಮಾಡಿದೆ.
ಈ ರೀತಿಯ ರಸ್ತೆಯ ವ್ಯವಸ್ಥೆಯಿಂದ ವಾಹನ ದಟ್ಟಣೆ ಕಡಿಮೆ ಏನೋ ಆಗುತ್ತೆ ಇದರಿಂದ ಅನೇಕರಿಗೆ ಸಮಸ್ಯೆಯೂ ಉಂಟಾಗುತ್ತೆ ಎಂದು ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನ ಕಾಮೆಂಟ್ ಬಾಕ್ಸ್‌ನಲ್ಲಿ ಬರೆದು ತಿಳಿಸಿದ್ದಾರೆ. ಇನ್ನು ಕೆಲವರು ಶವಸಂಸ್ಕಾರ ಮೆರವಣಿಗೆ ಕಾರಣಕ್ಕಾಗಿ ರಸ್ತೆಯನ್ನ ಅಗಲೀಕರಣವನ್ನ ಮಾಡಲಾಗಿದೆ. ಇದರಿಂದ ಬೀದಿ ಬದಿಯ ವ್ಯಾಪಾರಿಗಳ ಬದುಕನ್ನೇ ಬರ್ಬಾದ್ ಮಾಡಲಾಗಿದೆ. ಇನ್ನೊಬ್ಬರು ರಸ್ತೆಯನ್ನ ಶವಸಂಸ್ಕಾರದ ಮೆರವಣಿಗೆಗೆ ಮಾಡಲಾಯಿತೇ ವಿನಃ ವಾಹನಗಳ ಓಡಾಟಕ್ಕಲ್ಲ ಎಂದು ಬರೆದಿದ್ದಾರೆ.