ನಾಳೆಯಿಂದ ಅಗತ್ಯ ಸೇವೆ ಮತದಾರರಿಗೆ ಮತದಾನ ಮಾಡಲು ಅವಕಾಶ

ಚುನಾವಣಾ ಕಾರ್ಯ ನಿಮಿತ್ಯ ವಿವಿಧ ಇಲಾಖೆಗಳಡಿ ಬರುವ ಗೈರು ಹಾಜರಿ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ತಾವು ಮತದಾರರಾಗಿ ನೋಂದಾಯಿತರಾಗಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮೇ.2 ರಿಂದ 4 ರ ವರೆಗೆ ಮತದಾನ ಮಾಡಲು ಅನಕೂಲವಾಗಲು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪೋಸ್ಟಲ್  ವೋಟಿಂಗ್ ಸೆಂಟರ್(ಪಿವಿಸಿ)ಗಳನ್ನು ತೆರೆಯಲಾಗುತ್ತದೆ.

ಈಗಾಗಲೇ 12 ಡಿ ಅರ್ಜಿ ನಮೂನೆಯಲ್ಲಿ ಅಂಚೆ ಮತದಾನಕ್ಕೆ ಬೇಡಿಕೆ ಸಲ್ಲಿಸಿರುವ ಮತ್ತು ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಮತದಾನಕ್ಕೆ ಅನುಕೂಲವಾಗಲು, ಅವರು ನೋಂದಾಯಿತರಾಗಿರುವ ಮತಕ್ಷೇತ್ರದ ಚುನಾವಣಾಧಿಕಾರಿಗಳು ತಮ್ಮ ಕಚೇರಿಯಲ್ಲಿ ಪೋಸ್ಟಲ್ ವೋಟಿಂಗ್ ಸೆಂಟರ್ ಗಳನ್ನು  ಮೇ.2 ರಿಂದ 4 ರ ವರೆಗೆ ಮೂರು ದಿನ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತಾರೆ.

ಭಾರತ ಚುನಾವಣಾ ಆಯೋಗ ನಿಗಧಿಪಡಿಸಿದ ಮಾರ್ಗಸೂಚಿಗಳ ಅನ್ವಯ ಮತದಾನ ಪ್ರಕ್ರಿಯೆ ನಡೆಯುತ್ತದೆ. ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಬೇಕೆಂದು ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳಿಗೆ ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read