ಮತದಾನ ಮಾಡದವರಿಗೆ ಶಾಕ್: ವೋಟ್ ಹಾಕದಿದ್ದರೆ ವೇತನ ಕಡಿತ

ತುಮಕೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಚುನಾವಣಾ ಆಯೋಗ ಗರಿಷ್ಠ ಮತದಾನಕ್ಕೆ ಕ್ರಮ ಕೈಗೊಂಡಿದ್ದು, ಇದನ್ನು ಸಾಕಾರಗೊಳಿಸಲು ಕೈಗಾರಿಕೋದ್ಯಮಿಗಳು ವೇತನ ಸೂತ್ರ ಕೈಗೊಂಡಿದ್ದಾರೆ.

ಮತದಾನ ಮಾಡದಿದ್ದರೆ ವೇತನ ಕಡಿತಗೊಳಿಸಲು ಕೈಗಾರಿಕಾ ಸಂಘ ಸಂಸ್ಥೆಗಳು, ಕೈಗಾರಿಕೋದ್ಯಮಗಳು ತೀರ್ಮಾನ ಕೈಗೊಂಡಿವೆ. ಕೆಲಸಕ್ಕೆ ರಜೆ ಎಂದು ಊರು, ಪ್ರವಾಸಕ್ಕೆ ಹೊರಟರೆ ಅಂದಿನ ವೇತನ ನೀಡುವುದಿಲ್ಲ ಎಂದು ಉದ್ಯಮಿಗಳು ತಿಳಿಸಿದ್ದಾರೆ.

ಮತದಾನದ ಮರುದಿನ ಮೇ 11ರಂದು ಕಚೇರಿ, ಸಂಸ್ಥೆಗಳಿಗೆ ಹೋದ ಕೂಡಲೇ ಹಾಜರಾತಿ ಹಾಕಿ ಮತ ಹಾಕಿರುವುದಕ್ಕೆ ಸಾಕ್ಷಿಯಾಗಿ ಬೆರಳಿಗೆ ಅಂಟಿಸಿದ ಶಾಯಿ ತೋರಿಸಬೇಕು. ಆಗ ಮೇ 10 ನೇ ತಾರೀಖಿನ ಸಂಬಳ ಖಾತೆಗೆ ಜಮಾ ಆಗುತ್ತದೆ. ಇಲ್ಲದಿದ್ದರೆ ವೇತನ ಕಡಿತವಾಗುತ್ತದೆ.

ಕೈಗಾರಿಕಾ ಸಂಸ್ಥೆಗಳು ಮತದಾನದ ಉದ್ದೇಶದಿಂದ ನೌಕರಿಗೆ ನೌಕರರಿಗೆ ರಜೆ ನೀಡಿದ್ದು, ಮತದಾನ ಮಾಡದಿದ್ದರೆ ವೇತನ ಕಡಿತಗೊಳಿಸುವ ತೀರ್ಮಾನ ಕೈಗೊಂಡಿವೆ ಎಂದು ತುಮಕೂರು ನೀತಿ ಸಂಹಿತೆ ನೋಡೆಲ್ ಅಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read