ಶೇ. 87.97 ರಷ್ಟು ಮತ ಗಳಿಸಿದ ವ್ಲಾಡಿಮಿರ್ ಪುಟಿನ್ 5ನೇ ಬಾರಿಗೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆ

ಮಾಸ್ಕೋ: ಭಾನುವಾರ ನಡೆದ ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ಶೇ.87.97ರಷ್ಟು ಮತಗಳನ್ನು ಪಡೆದು ಜಯಗಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಶುಕ್ರವಾರ ಪ್ರಾರಂಭವಾದ ಮೂರು ದಿನಗಳ ಚುನಾವಣೆಯು ಬಿಗಿಯಾದ ವಾತಾವರಣದಲ್ಲಿ ನಡೆದಿದೆ, ಪುಟಿನ್ ಅವರ ರಾಜಕೀಯ ವೈರಿ ಅಲೆಕ್ಸಿ ನವಲ್ನಿ ಕಳೆದ ತಿಂಗಳು ಆರ್ಕ್ಟಿಕ್ ಜೈಲಿನಲ್ಲಿ ನಿಧನರಾದರು. ಇತರ ವಿಮರ್ಶಕರು ಜೈಲಿನಲ್ಲಿದ್ದಾರೆ ಅಥವಾ ದೇಶಭ್ರಷ್ಟರಾಗಿದ್ದಾರೆ. ಏಕಪಕ್ಷೀಯವಾಗಿದ್ದ ಚುನಾವಣೆಯಲ್ಲಿ ಪುಟಿನ್ ನಿರೀಕ್ಷೆಯಂತೆ ಜಯಗಳಿಸಿದ್ದಾರೆ.

71 ವರ್ಷದ ರಷ್ಯಾದ ನಾಯಕ ತಮ್ಮ 24 ವರ್ಷಗಳ ಆಡಳಿತ ಅಥವಾ ಎರಡು ವರ್ಷಗಳ ಹಿಂದೆ ಉಕ್ರೇನ್‌ ಮೇಲಿನ ಆಕ್ರಮಣದ ಬಗ್ಗೆ ಯಾವುದೇ ಟೀಕೆ, ವಿರೋಧ ಸುಳಿಯದಂತೆ ನೋಡಿಕೊಂಡಿದ್ದಾರೆ.

ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಅಧ್ಯಕ್ಷರಾಗಿ ಐದನೇ ಅವಧಿಯನ್ನು ಸುಲಭವಾಗಿ ಗೆದ್ದಿದ್ದಾರೆ. ಕನಿಷ್ಠ 2030 ರವರೆಗೆ ಅವರು ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read