ರಾಜಸ್ತಾನದ ಪ್ರಮುಖ ಪ್ರವಾಸಿ ತಾಣಗಳಿಗೆ ಒಮ್ಮೆ ಹೋಗಿ ಬನ್ನಿ

Image result for 5-coolest-places-in-rajasthan

ರಾಜಸ್ತಾನ ಎಂದರೆ ಮರುಭೂಮಿ. ಅಲ್ಲಿ ಬಿಸಿಲು ಜಾಸ್ತಿ. ಬೇಸಿಗೆ ಕಾಲದಲ್ಲಂತೂ ಅಲ್ಲಿಗೆ ಹೋಗಲು ಆಗಲ್ಲ ಎಂದು ಹೇಳುವುದನ್ನು ಕೇಳಿರುತ್ತೀರಿ. ಆದರೆ, ರಾಜಸ್ತಾನದಲ್ಲಿ ನೋಡಲೇಬೇಕಾದ ಹಲವು ಪ್ರಮುಖ ಪ್ರವಾಸಿ ಸ್ಥಳಗಳಿವೆ.

ಅಲ್ಲಿಗೆ ಅಪಾರ ಸಂಖ್ಯೆಯ ಪ್ರವಾಸಿಗರು, ಅದರಲ್ಲಿಯೂ, ವಿದೇಶಿ ಪ್ರವಾಸಿಗರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ರಾಜಸ್ತಾನದ ಪ್ರವಾಸಿ ಸ್ಥಳಗಳನ್ನು ನೋಡಿದ ಕೂಡಲೇ, ನಿಮಗೆ ಸಂತಸವಾಗುತ್ತದೆ. ಅಂತಹ ಸ್ಥಳಗಳ ಕುರಿತಾದ ಮಾಹಿತಿ ಇಲ್ಲಿದೆ. ಪ್ರಮುಖವಾಗಿ ರಾಜಸ್ತಾನದ ಜೈಪುರ್ ಹೆಸರುವಾಸಿಯಾದ ಸ್ಥಳ. ವಿದೇಶಿ ಪ್ರವಾಸಿಗರು ಭಾರತಕ್ಕೆ ಬಂದರೆ ಸಾಮಾನ್ಯವಾಗಿ ಇಲ್ಲಿಗೆ ಭೇಟಿ ಕೊಡುತ್ತಾರೆ. ಕೋಟೆ, ಶಾಪಿಂಗ್ ಸೇರಿದಂತೆ ಹಲವು ನೋಡಬಹುದಾದ ಸ್ಥಳಗಳು ಈ ‘ಪಿಂಕ್ ಸಿಟಿ’ಯಲ್ಲಿವೆ.

ಮತ್ತೊಂದು ಪ್ರಮುಖ ಸ್ಥಳ ಎಂದರೆ ಉದಯಪುರ. ಇದು ನಿಮಗೆ ರಾಯಲ್ ಅನುಭವ ನೀಡುತ್ತದೆ. ಇಲ್ಲಿನ ಶ್ರೀಮಂತ ಸಂಸ್ಕೃತಿ, ಸೌಂದರ್ಯ, ಅರಮನೆ ನಿಮಗೆ ಖುಷಿಕೊಡುತ್ತವೆ. ಪಾರಂಪರಿಕ ತಾಣ ಎಂದೇ ಹೆಸರುವಾಸಿಯಾಗಿರುವ ಜೈಸಲ್ಮೇರ್ ನಲ್ಲಿ ಹಲವಾರು ಕೋಟೆ, ದೇವಾಲಯಗಳನ್ನು ನೋಡಬಹುದು. ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ನಿರ್ಮಾಣವನ್ನು ಇಲ್ಲಿ ಕಾಣಬಹುದಾಗಿದೆ.

ಅದೇ ರೀತಿ ಮತ್ತೊಂದು ಪ್ರಮುಖ ಪ್ರವಾಸಿ ಸ್ಥಳ ಎಂದರೆ, ಜೋಧ್ ಪುರ. ರಾಜಸ್ತಾನದ ಎರಡನೇ ಮೆಟ್ರೋಪಾಲಿಟನ್ ಸಿಟಿ ಎಂಬ ಹೆಗ್ಗಳಿಕೆ ಈ ನಗರದ್ದಾಗಿದೆ. ಪ್ರಾಚೀನ ನಗರವಾಗಿರುವ ಪುಷ್ಕರ್ ನಲ್ಲಿರುವ ಬ್ರಹ್ಮ ದೇವಾಲಯ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಹೀಗೆ ರಾಜಸ್ತಾನದ ಪ್ರಮುಖ ಪ್ರವಾಸಿ ತಾಣಗಳಾದ ಜೈಪುರ್, ಉದಯಪುರ, ಜೈಸಲ್ಮೇರ್, ಜೋಧ್ ಪುರ, ಪುಷ್ಕರ್ ಗೆ ಒಮ್ಮೆ ಹೋಗಿ ಬನ್ನಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read