ಮೇಲ್ಬೋರ್ನ್: ಬ್ರಿಟನ್ ರಾಜಕುಮಾರ ಪ್ರಿನ್ಸ್ ಆಂಡ್ರೂ ತನ್ನ ಕಾಮತೃಷೆಗಾಗಿ ನನ್ನನ್ನು ಬಾಲಕಿಯಾಗಿದ್ದಗಲೇ ಬಳಸಿಕೊಂಡಿದ್ದ ಎಂದು ಗಂಭೀರ ಆರೋಪ ಮಾಡಿದ್ದ ಅಮೆರಿಕಾ ಮೂಲದ ಮಹಿಳೆ ವರ್ಜಿನಿಯಾ ಗಿಫ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪಶ್ಚಿಮ ಆಸ್ಟ್ರೇಲಿಯಾದ ನೀರ್ ಗಬ್ಬಿ ಎಂಬ ಪ್ರದೇಶದಲ್ಲಿ ತಮ್ಮ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರ್ಜಿನಿಯಾ ಗಿಫ್ರಿ ಸ್ನೇಹಿತೆ ದಿನಿ ವೋನ್ ತಿಳಿಸಿದ್ದಾರೆ.
ವರ್ಜಿನಿಯಾ ಗಿಫ್ರಿಗೆ 41 ವರ್ಷವಾಗಿತ್ತು. ಆಕೆ ತಮಾಷೆ ಹಾಗೂ ಭಾರಿ ಬುದ್ಧಿವಂತ ಮಹಿಳೆ. ಆದರೆ ಬಲಿಪಶುಮಾಡುವವರ ಕೈಗೆ ಸಿಲುಕಿ ನರಳುತ್ತಿದ್ದಳು ಎಂದು ಕಣ್ಣೀರಿಟ್ಟಿದ್ದಾರೆ.
ಕಳೆದವಾರ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಸ್ ಅಪಘಾತದಲ್ಲಿ ವರ್ಜಿನಿಯಾ ಗಂಭೀರವಾಗಿ ಗಾಯಗೊಂಡಿದ್ದರು. ಇದು ಬಸ್ ಅಪಘಾತವೋ? ಕೊಲೆ ಯತ್ನವೋ? ಎಂಬ ಶಂಕೆ ವ್ಯಕ್ತಪಡಿಸಿದ್ದರು. ಈ ಘಟನೆ ಬಳಿಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ ಹಲವು ದುಷ್ಟಶಕ್ತಿಗಳು ನನ್ನನ್ನು ಮುಗಿಸಲು ಯತ್ನಿಸುತ್ತಿವೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
ಬ್ರಿಟನ್ ರಾಜಕುಮಾರ ಪ್ರಿನ್ಸ್ ಆಂಡ್ರೂ ತನ್ನನ್ನು ಮೂರುಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದರು. ಅಮೆರಿಕಾದ ಮಕಕ್ಳ ಕಳ್ಳಸಾಗಣೆದಾರ ಜೆಫ್ರಿ ಇಫ್ ಸ್ಟಿನ್ ಅವರಿಗೆ ಸಹಾಯ ಮಾಡಿದ್ದ ಎಂದು 2015ರಲ್ಲಿ ಬಿಬಿಸಿಗೆ ನೀಡಿದ್ದ ಸಂದರ್ಶನದಲ್ಲಿ ವರ್ಜಿನಿಯಾ ಹೇಳಿದ್ದರು. ಈ ಸಂದರ್ಶನಕ್ಕೆ ಆಗ ಪ್ರಿನ್ಸ್ ಆಂಡ್ರೂ ಜೊತೆಗಿನ ವರ್ಜಿನಿಯಾ ಫೋಟೋ ವೈರಲ್ ಆಗಿದ್ದು ಕಾರಣವಾಗಿತ್ತು.