ವಿರಾಟ್​ ಕೊಹ್ಲಿ ಆಸ್ತಿ ವಿವರ ಬಹಿರಂಗ: ಕೇಳಿದ್ರೆ ಸುಸ್ತಾಗ್ತೀರಾ….!

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಇದೀಗ ಗ್ರೌಂಡ್ ಹೊರಗೂ ದಾಖಲೆ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 252 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕೊಹ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಇವರು, 1,050 ಕೋಟಿ ರೂಪಾಯಿ ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇದು ಸದ್ಯದ ಅಂತರರಾಷ್ಟ್ರೀಯ ಕ್ರಿಕೆಟಿಗರಲ್ಲಿಯೇ ಅತ್ಯಧಿಕವಾಗಿದೆ.

ಈ ಕುರಿತು ಸ್ಟಾಕ್ ಗ್ರೋ ಪ್ರಕಾರ ತಿಳಿಸಿದೆ. 34 ವರ್ಷದ ಕೊಹ್ಲಿ ತಮ್ಮ ‘A+’ ಟೀಮ್ ಇಂಡಿಯಾ ಒಪ್ಪಂದದಿಂದ 7 ಕೋಟಿ ಗಳಿಸುತ್ತಾರೆ. ಅವರ ಪ್ರತಿ ಟೆಸ್ಟ್‌ಗೆ 15 ಲಕ್ಷ ರೂ., ODIನಿಂದ 6 ಲಕ್ಷ ರೂ. ಮತ್ತು T20 ಪಂದ್ಯಕ್ಕೆ 3 ಲಕ್ಷ ರೂ. ಪಡೆಯುತ್ತಾರೆ.

ಅಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಒಪ್ಪಂದದಿಂದ ವಾರ್ಷಿಕವಾಗಿ 15 ಕೋಟಿ ರೂ. ಗಳಿಸುತ್ತಾರೆ. ಅವರು ಅನೇಕ ಬ್ರಾಂಡ್‌ಗಳನ್ನು ಹೊಂದಿದ್ದಾರೆ ಮತ್ತು ಬ್ಲೂ ಟ್ರೈಬ್, ಯೂನಿವರ್ಸಲ್ ಸ್ಪೋರ್ಟ್ಸ್‌ಬಿಜ್, ಎಂಪಿಎಲ್ ಮತ್ತು ಸ್ಪೋರ್ಟ್ಸ್ ಕಾನ್ವೊ ಸೇರಿದಂತೆ ಏಳು ಸ್ಟಾರ್ಟ್-ಅಪ್‌ಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ.

ಕೊಹ್ಲಿ 18 ಬ್ರಾಂಡ್‌ಗಳ ರಾಯಭಾರಿಗಳಾಗಿದ್ದಾರೆ ಮತ್ತು ಪ್ರತಿ ಜಾಹೀರಾತಿನ ಚಿತ್ರೀಕರಣಕ್ಕಾಗಿ ವಾರ್ಷಿಕವಾಗಿ ರೂ.7.50 ರಿಂದ 10 ಕೋಟಿ ಶುಲ್ಕವನ್ನು ವಿಧಿಸುತ್ತಾರೆ. ಬಾಲಿವುಡ್ ಮತ್ತು ಕ್ರೀಡಾ ಉದ್ಯಮದಲ್ಲಿಯೇ ಕೊಹ್ಲಿ ಪಡೆಯುತ್ತಿರುವ ಅತಿಹೆಚ್ಚು ಮೊತ್ತ. ಇಂತಹ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಅವರು ಸುಮಾರು 175 ಕೋಟಿ ರೂಪಾಯಿ ಗಳಿಸುತ್ತಾರೆ.

ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಅವರು ಪ್ರತಿ ಪೋಸ್ಟ್‌ಗೆ ಕ್ರಮವಾಗಿ 8.9 ಕೋಟಿ ಮತ್ತು 2.5 ಕೋಟಿ ರೂಪಾಯಿಗಳನ್ನು ವಿಧಿಸುತ್ತಾರೆ. ಮುಂಬೈ (34 ಕೋಟಿ ರೂ.) ಮತ್ತು ಗುರುಗ್ರಾಮ (80 ಕೋಟಿ ರೂ.) ಗಳಲ್ಲಿ ಎರಡು ಮನೆಗಳನ್ನು ಹೊಂದಿದ್ದಾರೆ ಮತ್ತು 31 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

https://twitter.com/CricCrazyJohns/status/1670287655840645121?ref_src=twsrc%5Etfw%7Ctwcamp%5Etweetembed%7Ctwterm%5E167

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read