ಐಪಿಎಲ್ 2023 ರ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬುಧವಾರ ಸೋಲಿನ ರುಚಿ ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ, ಎಂ ಚಿನ್ನಸ್ವಾಮಿ ಅದೃಷ್ಟ ತರಲಿಲ್ಲ. ಆರ್‌ಸಿಬಿಗೆ 201 ರನ್ ಗುರಿ ನೀಡಿದ ಕೆಕೆಆರ್ 21 ರನ್ ಗಳ ಅಂತರದಿಂದ ಜಯ ದಾಖಲಿಸಿತು.
ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಜೊತೆಯಾಟದಿಂದ RCB ಯ ಚೇಸ್‌ನ ಆರಂಭವು ಉತ್ತಮವಾಗಿತ್ತು. ಕೊಹ್ಲಿ ಐಪಿಎಲ್ 2023ರ ಐದನೇ ಅರ್ಧಶತಕವನ್ನು ಕೇವಲ 33 ಎಸೆತಗಳಲ್ಲಿ ಪೂರೈಸಿದರು. ಆರ್‌ಸಿಬಿ 12 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದ್ದರೂ, ಕೊಹ್ಲಿಯ ಉಪಸ್ಥಿತಿಯು ಆರ್‌ಸಿಬಿಗೆ ಗೆಲುವಿನ ಅವಕಾಶವನ್ನು ನೀಡಿತು. ಆದರೆ, ಆಂಡ್ರೆ ರಸೆಲ್ ಎಸೆದ 13ನೇ ಓವರ್‌ನ ಮೊದಲ ಎಸೆತದಲ್ಲಿ ಮಹತ್ವದ ತಿರುವು ಸಿಕ್ಕಿತು.
ವೆಂಕಟೇಶ್ ಅಯ್ಯರ್ ಅತ್ಯಾಕರ್ಷಕ ಕ್ಯಾಚ್ ಪಡೆಯುವ ಮೂಲಕ ಕೊಹ್ಲಿ 54 ರನ್ ಗಳಿಸಿ ಔಟಾದರು. ಈ ವೇಳೆ RCBಯ ಅಪಾರ ಅಭಿಮಾನಿಗಳು ಅವಾಕ್ಕಾದರು. ಆಟ ನೋಡುತ್ತಿದ್ದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ಶಾಕ್ ಗೆ ಒಳಗಾದರು. ಪತಿ ಕೊಹ್ಲಿ ಹೊಡೆದ ಬಾಲ್ ನ ವೆಂಕಟೇಶ್ ಅಯ್ಯರ್ ಕ್ಯಾಚ್ ಹಿಡಿಯುತ್ತಿದ್ದಂತೆ ಇದನ್ನು ನಂಬಲು ಸಾಧ್ಯವಾಗದೇ ಅನುಷ್ಕಾ ಒಂದು ಕ್ಷಣ ಮೌನಕ್ಕೆ ಜಾರಿ ಕೂತರು.
https://twitter.com/IPL/status/1651270562168307713?ref_src=twsrc%5Etfw%7Ctwcamp%5Etweetembed%7Ctwterm%5E1651270562168307713%7Ctwgr%5Ef01362548e5d96e4aa76d4ac743d7e114b865ab9%7Ctwcon%5Es1_&ref_url=https%3A%2F%2Fsports.ndtv.com%2Fipl-2023%2Fvirat-kohlis-dismissal-leaves-wife-anushka-sharma-shell-shocked-as-venkatesh-iyer-takes-stunning-catch-watch-3982943