ಐಪಿಎಲ್ ಪಂದ್ಯಕ್ಕೂ ಮುನ್ನ ಗಮನ ಸೆಳೆದ ವಿರಾಟ್ ಕೊಹ್ಲಿ ಕೈಯಲ್ಲಿನ ಹೊಸ ಟ್ಯಾಟೂ

ಭಾರತೀಯ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಮುಂಬರುವ ಆವೃತ್ತಿಗೆ ಮುಂಚಿತವಾಗಿ ಬೆಂಗಳೂರಿಗೆ ಬಂದಿಳಿದಿದ್ದು, ಅವರ ಕೈಯಲ್ಲಿನ ಹೊಸ ಟ್ಯಾಟೂ ಗಮನ ಸೆಳೆದಿದೆ.

ಶನಿವಾರ ತಮ್ಮ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಶಿಬಿರವನ್ನ ಸೇರಿಕೊಂಡರು. ಆರ್‌ಸಿಬಿ ಕೊಹ್ಲಿಯ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, “ಕಾಯುವಿಕೆ ಮುಗಿದಿದೆ ಮತ್ತು ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿದ್ದಾರೆ ! ಹ್ಯಾಪಿ ಹೋಮ್‌ಕಮಿಂಗ್, ಕಿಂಗ್!” ಎಂದಿದೆ.

ಚಿತ್ರದಲ್ಲಿ ವಿರಾಟ್ ಕೊಹ್ಲಿ ತಮ್ಮ ಎಂದಿನಂತೆ ಥಂಬ್ಸ್-ಅಪ್ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಬಲಗೈಯಲ್ಲಿ ಹೊಸ ಹಚ್ಚೆ ಹಾಕಿಸಿಕೊಂಡಿರುವುದನ್ನ ಗಮನಿಸಬಹುದು. ಇದನ್ನು ಇಂಟರ್ನೆಟ್ ಬಳಕೆದಾರರು ಗುರ್ತಿಸಿದ್ದಾರೆ.

ಟ್ಯಾಟೂಗಳ ಮೇಲೆ ಕೊಹ್ಲಿಗೆ ಹೆಚ್ಚು ಮೋಹವಿದೆ. ಅವರು ತಮ್ಮ ದೇಹದ ಮೇಲೆ ಹಲವಾರು ಹಚ್ಚೆಗಳನ್ನು ಹೊಂದಿದ್ದಾರೆ ಮತ್ತು ಅವರ ಅಭಿಮಾನಿಗಳು ಸಹ ಅವುಗಳನ್ನು ಪ್ರೀತಿಸುತ್ತಾರೆ.

IPL 2023: Virat Kohli seen flaunting new tattoo while joining RCB camp

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read