ನವದೆಹಲಿ: ಭಾರತ-ಅಫ್ಘಾನಿಸ್ತಾನ ನಡುವೆ ಬುಧವಾರ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಆದರೀಗ, ಪಂದ್ಯದ ವೇಳೆ ನಡೆದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ.
ಹೌದು, ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ ಮ್ಯಾನ್ ವಿರಾಟ್ ಕೊಹ್ಲಿ, ನವೀನ್-ಉಲ್-ಹಕ್ ಅವರನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸುವಂತೆ ಪ್ರೇಕ್ಷಕರಿಗೆ ವಿನಂತಿಸಿದ್ದಾರೆ. ಭಾರತ ಮತ್ತು ಅಫ್ಘಾನಿಸ್ತಾನ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಪಂದ್ಯದ ವೇಳೆ, ಪ್ರೇಕ್ಷಕರು ಕೊಹ್ಲಿ, ಕೊಹ್ಲಿ ಎಂದು ಕೂಗುತ್ತಾ, ಅಪ್ಘನ್ ಆಟಗಾರ ಮೂಲಕ ನವೀನ್ ಉಲ್ ಹಕ್ ರನ್ನು ಅಣಕಿಸುತ್ತಿರುವುದು ಕಂಡುಬಂದಿದೆ.
ಈ ವೇಳೆ ಮಧ್ಯಪ್ರವೇಶಿಸಿದ ವಿರಾಟ್ ಕೊಹ್ಲಿ ನಿಜವಾದ ಕ್ರೀಡಾ ಮನೋಭಾವವನ್ನು ವ್ಯಕ್ತಪಡಿಸಿದ್ದಾರೆ. ನವೀನ್ ಉಲ್ ಹಕ್ ರನ್ನು ಅಣಕಿಸದಂತೆ ಕೊಹ್ಲಿ ಪ್ರೇಕ್ಷಕರಲ್ಲಿ ಮನವಿ ಮಾಡಿದ್ರು. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ಕೊಹ್ಲಿಯ ಕ್ರೀಡಾ ಮನೋಭಾವಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಇನ್ನು, ಪಂದ್ಯದಲ್ಲಿ ಇಬ್ಬರು ಆಟಗಾರರು ಹಸ್ತಲಾಘವ ಮಾಡಿ, ತಬ್ಬಿಕೊಂಡಿದ್ದು ಸಹ ಕಂಡುಬಂತು. ಪಂದ್ಯದ ನಂತರ ಸಹ ಇಬ್ಬರೂ ಆಟಗಾರರು ಸ್ನೇಹದಿಂದ ವರ್ತಿಸಿದ್ದಾರೆ.
https://twitter.com/mufaddal_vohra/status/1712127162013376588?ref_src=twsrc%5Etfw%7Ctwcamp%5Etweetembed%7Ctwterm%5E1712127162013376588%7Ctwgr%5Ea985630d5d908cf15175b82945a41c1bd58a88a4%7Ctwcon%5Es1_&ref_url=https%3A%2F%2Fwww.latestly.com%2Fsocially%2Fsports%2Fcricket%2Fvirat-kohli-requests-crowd-to-stop-mocking-naveen-ul-haq-during-ind-vs-afg-icc-cricket-world-cup-2023-match-watch-video-5480446.html