ಚಾಂಪಿಯನ್ಸ್ ಟ್ರೋಫಿ ಗೆದ್ದರೂ ಪೋಸ್ಟ್ ಹಾಕದ ಕೊಹ್ಲಿ: ಫ್ಯಾನ್ಸ್‌ಗೆ ಶಾಕ್….!

ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಬರೀ ಜಾಹೀರಾತು ಯಾಕೆ ಹಾಕ್ತಿದ್ದಾರೆ? ಪರ್ಸನಲ್ ಅಪ್‌ಡೇಟ್ಸ್ ಯಾಕ್ ಶೇರ್ ಮಾಡ್ತಿಲ್ಲ ಅಂತ ಎಲ್ರೂ ಕೇಳ್ತಿದ್ರು. ಅದಕ್ಕೆ ಕೊಹ್ಲಿ ಅವರೇ ಸತ್ಯ ಬಾಯ್ಬಿಟ್ಟಿದ್ದಾರೆ.

ಕೊಹ್ಲಿ ಯಾವಾಗ ಪೋಸ್ಟ್ ಹಾಕಿದ್ರೂ ಕಾಮೆಂಟ್ ಸೆಕ್ಷನ್‌ನಲ್ಲಿ ಜಾಹೀರಾತು ಬಗ್ಗೆ ಕಂಪ್ಲೇಂಟ್ ಬರ್ತಿತ್ತು. ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಾಗಲೂ ಕೊಹ್ಲಿ ಪೋಸ್ಟ್ ಹಾಕ್ದೆ ಇರೋದಕ್ಕೆ ಫ್ಯಾನ್ಸ್ ಬೇಜಾರು ಮಾಡ್ಕೊಂಡಿದ್ರು.

ಇದಕ್ಕೆ ಕೊಹ್ಲಿ, “ಚಾಂಪಿಯನ್ಸ್ ಟ್ರೋಫಿ ಗೆದ್ದ ಬಗ್ಗೆ ಪೋಸ್ಟ್ ಹಾಕೋದ್ರಿಂದ ನನ್ನ ಖುಷಿ ಜಾಸ್ತಿಯಾಗಲ್ಲ. ರಿಯಾಲಿಟಿ ಹಾಗೇ ಇರುತ್ತೆ” ಅಂತ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಿಂದ ದೂರ ಇರೋಕೆ ನಾನೇ ಡಿಸೈಡ್ ಮಾಡ್ದೆ ಅಂತ ಕೊಹ್ಲಿ ಹೇಳಿದ್ದಾರೆ. “ಟೆಕ್ನಾಲಜಿ ಗೊಂದಲ ಮಾಡ್ತಿದೆ. ಅದನ್ನ ನಿಭಾಯಿಸೋದು ಕಷ್ಟ ಆಗ್ತಿತ್ತು. ನನ್ನ ಆಟ ಇಲ್ಲಾ ಲೈಫ್‌ನಲ್ಲಿ ಯೂಸ್ ಮಾಡ್ಬಹುದಾದ ಎನರ್ಜಿನ ಅದು ಕದಿಯೋ ತರ ಇತ್ತು” ಅಂತ ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 270 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read