ಪ್ರೇಮಿಗಳ ದಿನದಂದು ಪ್ರೀತಿ ಮತ್ತು ಪ್ರೇಮವು ಎಲ್ಲೆಡೆ ಹರಡಿದ್ದರೂ, ಈ ವಿಶೇಷ ದಿನದಂದು ಕೆಲವರು ವಿಭಿನ್ನವಾಗಿ ಆಚರಿಸುತ್ತಾರೆ. ಇಲ್ಲೊಬ್ಬ ಯುವತಿ ತನ್ನ ಮಾಜಿ ಪ್ರಿಯತಮನಿಗೆ ʼವ್ಯಾಲೆಂಟೈನ್ಸ್ ಡೇʼ ಪ್ರತೀಕಾರವಾಗಿ 100 ಪಿಜ್ಜಾಗಳನ್ನು ಕಳುಹಿಸಿದ್ದಾಳೆ ! ಅದು ಕೂಡ ಕ್ಯಾಶ್ ಆನ್ ಡೆಲಿವರಿ ಮೂಲಕ !! ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ಡೆಲಿವರಿ ಬಾಯ್ ಹಲವಾರು ಪಿಜ್ಜಾ ಬಾಕ್ಸ್ ಹೊತ್ತುಕೊಂಡು ಮೆಟ್ಟಿಲುಗಳನ್ನು ಹತ್ತಿ ಹೋಗುತ್ತಿರುವುದನ್ನು ಕಾಣಬಹುದು. ನಂತರ ಕ್ಯಾಮೆರಾ ಚಲಿಸಿದಾಗ, ಬಾಗಿಲಿನ ಮುಂದೆ ರಾಶಿ ರಾಶಿ ಪಿಜ್ಜಾ ಬಾಕ್ಸ್ ಬಿದ್ದಿರುವುದನ್ನು ತೋರಿಸುತ್ತದೆ. ಡೆಲಿವರಿ ಬಾಯ್ ಆ ವ್ಯಕ್ತಿಯನ್ನು ಪಿಜ್ಜಾಗಳನ್ನು ತೆಗೆದುಕೊಳ್ಳುವಂತೆ ಕರೆಯುತ್ತಾನೆ.
ಈ ವಿಡಿಯೋ ಇಂಟರ್ನೆಟ್ ನಲ್ಲಿ ಸಂಚಲನ ಮೂಡಿಸಿದೆ. ಕೆಲವರು ಇದನ್ನು ಹಾಸ್ಯವಾಗಿ ತೆಗೆದುಕೊಂಡರೆ, ಇನ್ನು ಕೆಲವರು ಇದು ಮ್ಯಾಜಿಕ್‌ಪಿನ್ ಅಥವಾ ಪಿಜ್ಜಾ ಕಂಪನಿಯ ಮಾರ್ಕೆಟಿಂಗ್ ತಂತ್ರ ಎಂದು ಹೇಳುತ್ತಿದ್ದಾರೆ. ಏಕೆಂದರೆ ಡೆಲಿವರಿ ಬಾಯ್ ದುಬಾರಿ ನೈಕ್ ಶೂಗಳನ್ನು ಧರಿಸಿದ್ದಾನೆ, ಇದು ಸಾಮಾನ್ಯವಾಗಿ ಕಾಣಸಿಗುವುದಿಲ್ಲ ಮತ್ತು ವಿಡಿಯೋ ಯೋಜಿತವಾಗಿ ಕಾಣುತ್ತದೆ. ಆದರೆ, ಇದರ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಈ ತಮಾಷೆಯ ಮತ್ತು ಗೊಂದಲಮಯವಾದ ವೈರಲ್ ವಿಡಿಯೋ ಇಂಟರ್ನೆಟ್ ಮತ್ತು ಕಾಮೆಂಟ್ ವಿಭಾಗದಲ್ಲಿ ಬಿರುಗಾಳಿ ಎಬ್ಬಿಸಿದೆ.