ರಸ್ತೆಯಲ್ಲಿ ಹೋಗುವಾಗ ಸುರಕ್ಷತೆ ಅತಿ ಮುಖ್ಯ. ಅದರಲ್ಲೂ ವಾಹನದಲ್ಲಿ ಚಲಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ರೆ ಅಪಾಯ ಎದುರಾಗಿಬಿಡುತ್ತದೆ. ಅದು ಪುಟ್ಟ ರಸ್ತೆಯಾಗಿರಲಿ ಅಥವಾ ದೊಡ್ಡ ಹೈವೆಯೇ ಆಗಿರಲಿ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಕೊಂಡಿರುವ ಭಯಾನಕ ಅಪಘಾತ ದೃಶ್ಯ ನೋಡುಗರ ಎದೆ ಝಲ್ ಎನಿಸುತ್ತದೆ.
ಸ್ಕೂಟಿ ಸವಾರ ಎದುರುಗಡೆ ಇಂದ ಬರ್ತಿದ್ದ ಕಾರ್ ಗೆ ವೇಗವಾಗಿ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಕೂಟಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಕೆಳಗೆ ಬಿದ್ದ ಸ್ಕೂಟಿ ಸವಾರನಿಗೆ ಹೆಚ್ಚಿನ ಅಪಾಯವಾಗದೆ ಆತ ದಿಕ್ಕುತೋಚದಂತೆ ಎದ್ದು ನಿಂತಿದ್ದಾನೆ.
ಎದುರಿನ ಟ್ರಾಫಿಕ್ ಅನ್ನು ಲೆಕ್ಕಿಸದೆ ಮುಂಭಾಗದಲ್ಲಿರುವ ಕಾರನ್ನು ಹಿಂದಿಕ್ಕುವ ಸ್ಕೂಟಿ ಚಾಲಕನ ಹಠಾತ್ ನಿರ್ಧಾರದಿಂದ ಈ ಭಯಾನಕ ಅಪಘಾತ ಸಂಭವಿಸಿದೆ. ಕೆಲವೇ ಸೆಕೆಂಡುಗಳಲ್ಲಿ ಸ್ಕೂಟಿ ಕಾರ್ ಗೆ ಮುಖಾಮುಖಿಯಾಗಿ ಅಪ್ಪಳಿಸುತ್ತಿದ್ದಂತೆ ಚಾಲಕರು ನಿಜಕ್ಕೂ ಆಘಾತ ಅನುಭವಿಸಿದರು. ವೈರಲ್ ವಿಡಿಯೋ ನೋಡಿದ ಜನ ಸ್ಕೂಟಿ ಸವಾರನ ಆತುರತೆಯ ಬಗ್ಗೆ ಟೀಕಿಸಿದ್ದು ರಸ್ತೆ ಸುರಕ್ಷತೆ ಬಗ್ಗೆ ಎಚ್ಚರವಿರಬೇಕೆಂದಿದ್ದಾರೆ.
https://twitter.com/gharkekalesh/status/1833797127362744534?ref_src=twsrc%5Etfw%7Ctwcamp%5Etweetembed%7Ctwterm%5E1833797127362744534%7Ctwgr%5E002f92eac9cf7fc05117ca0bf63f01569d689497%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fdnpindia-epaper-dh32aa52fd1e564d7ab912b538d71eaab2%2Fviralvideounbelievablescootyridertriestoovertakedangerouslyresultsinheadoncollisioncheckwhathappensnext-newsid-n