ದಾಳಿ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ನಾಚಿಕೆಗೇಡಿನ ವರ್ತನೆ; ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ ʼವೈರಲ್ ವಿಡಿಯೋʼ

ಕೊಲೆ ಯತ್ನ ಪ್ರಕರಣದ ತನಿಖೆ ವೇಳೆ ಉತ್ತರಪ್ರದೇಶದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಮಹಿಳೆಯೊಂದಿಗೆ ನಾಚಿಕೆಗೇಡಿನ ರೀತಿಯಲ್ಲಿ ವರ್ತಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಡಿಯೋರಿಯಾದಲ್ಲಿ ಪೊಲೀಸರ ದುಷ್ಕೃತ್ಯದ ಆಘಾತಕಾರಿ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಭಟ್ನಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಂಜೀತ್ ಸಿಂಗ್ ಭಡೋರಿಯಾ ಭರೌಲಿ ಗ್ರಾಮದಲ್ಲಿ ನಡೆಸಿದ ವಿವಾದಾತ್ಮಕ ದಾಳಿಯು ಆಕ್ರೋಶಕ್ಕೆ ಕಾರಣವಾಗಿದೆ.

ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ದಾಳಿ ನಡೆಸಿದಾಗ ವಿವಾದ ಪ್ರಾರಂಭವಾಯಿತು. ಯಾವುದೇ ಮಹಿಳಾ ಪೊಲೀಸ್ ಸಿಬ್ಬಂದಿಯಿಲ್ಲದೆ ಭಡೋರಿಯಾ ಮಹಿಳಾ ಕ್ವಾರ್ಟರ್ಸ್ ಪ್ರವೇಶಿಸಿ ಮಹಿಳೆಯೊಂದಿಗೆ ವಾಗ್ವಾದ ನಡೆಸಿದರು.

ಆರೋಪಿಗಳು ಶರಣಾಗದಿದ್ದರೆ ಬುಲ್ಡೋಜರ್‌ನಿಂದ ಮನೆ ಕೆಡವುದಾಗಿ ಬೆದರಿಕೆ ಹಾಕಿದ್ದರು. ಈ ವೇಳೆ ಹಿರಿಯರು, ಮಹಿಳೆಯರಿಗೆ ನಿಂದನೆ ಮತ್ತು ದೈಹಿಕ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದು ಇನ್ಸ್ ಪೆಕ್ಟರ್‌ನ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿ ಇನ್ಸ್ ಪೆಕ್ಟರ್ ರಂಜೀತ್ ಸಿಂಗ್ ಭಡೋರಿಯಾ ನಿಂದಿಸಿದ್ದು , ಕುಟುಂಬದ ಸದಸ್ಯರ ಘನತೆ ಬಗ್ಗೆ ಪ್ರಶ್ನಿಸಿದ್ದಾರೆ. “ನೀನು ನಿನ್ನ ತಂದೆಯ ಗುಲಾಮನಾ ? ನಿಮ್ಮ ಮನೆಗೆ ಪೊಲೀಸರು ಎಷ್ಟು ಬಾರಿ ಬಂದಿದ್ದಾರೆ ? ನೀವು ಕಾಣಿಸದಿದ್ದರೆ, ನಾವು ನಿಮ್ಮ ಮನೆಯ ಮೇಲೆ ಬುಲ್ಡೋಜರ್ ಅನ್ನು ಓಡಿಸುತ್ತೇವೆ.” ಎಂದು ಬೆದರಿಕೆ ಹಾಕಿದ್ದಾರೆ.

ಲೋಕಸಭೆ ಚುನಾವಣೆ ವೇಳೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು ಅದರ ಪರಿಣಾಮ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಮೂವರನ್ನು ಬಂಧಿಸಿ ನಂತರ ಅವರು ಜಾಮೀನು ಪಡೆದಿದ್ದಾರೆ. ಆದಾಗ್ಯೂ ಹಲವಾರು ಪ್ರಯತ್ನಗಳ ಹೊರತಾಗಿಯೂ ಓರ್ವ ಆರೋಪಿಯು ತಲೆಮರೆಸಿಕೊಂಡಿದ್ದು ಅವನ ಪತ್ತೆಗಾಗಿ ಇನ್ಸ್ ಪೆಕ್ಟರ್ ದಾಳಿ ಮಾಡಿದಾಗ ಈ ರೀತಿ ವರ್ತಿಸಿದ್ದಾರೆ.

https://twitter.com/priyarajputlive/status/1830130758008070337?ref_src=twsrc%5Etfw%7Ctwcamp%5Etweetembed%7Ctwterm%5E1830130758008070337%7Ctwgr%5E87951017766ff10fb4a1ae60b7b4c8543c7b95ac%7Ctwcon

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read