ಆಸ್ಕರ್ ವಿಜೇತ ಡಾಕ್ಯುಮೆಂಟರಿಯ ನಿಜ ಜೀವನದ ಜೋಡಿ ಬೊಮ್ಮನ್ ಹಾಗೂ ಬೆಲ್ಲಿರ ಹೊಸ ವಿಡಿಯೋವೊಂದು ವೈರಲ್ ಆಗಿದೆ. ಆನೆ ಮರಿಯ ಪೋಷಕರಾದ ಬೊಮ್ಮನ್ ಹಾಗೂ ಬೆಲ್ಲಿ ಆಸ್ಕರ್ ಬಂದ ಬಳಿಕ ಇದೇ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುತ್ತಿರುವ ವಿಡಿಯೋ ಇದಾಗಿದೆ.
ಇಂಡಿಗೋ ವಿಮಾನವನ್ನೇರಿದ ಬೊಮ್ಮನ್ ಮತ್ತು ಬೆಲ್ಲಿರ ಉಪಸ್ಥಿತಿಯನ್ನು ಘೋಷಿಸುವ ಮೂಲಕ ಪೈಲಟ್ ಅಲ್ಲಿದ್ದ ಸಹ ಪ್ರಯಾಣಿಕರಿಗೆ ಅವರ ಕುರಿತು ಪರಿಚಯ ಮಾಡಿಕೊಟ್ಟಿದ್ದಾರೆ.
“ಅವರನ್ನು ವಿಮಾನದಲ್ಲಿ ನೋಡಲು ಸಿಕ್ಕಿದ್ದು ನಮ್ಮ ಭಾಗ್ಯ…… ಅವರು ನಟರಲ್ಲ, ಚಿತ್ರದಲ್ಲಿ ನಟನೆ ಮಾಡಿದ ಸಾಮಾನ್ಯ ಜನರು,” ಎಂದು ಪೈಲಟ್ ಹೇಳುತ್ತಲೇ ವಿಮಾನದಲ್ಲಿದ್ದ ಪ್ರಯಾಣಿಕರಿಂದ ಒಕ್ಕೊರಲಿನಿಂದ ಚಪ್ಪಾಳೆಯ ಸುರಿಮಳೆ ಮೂಡಿದೆ.
ಮಾರ್ಚ್ 12 ರಂದು ಆಸ್ಕರ್‌ನ ’ಶ್ರೇಷ್ಠ ಡಾಕ್ಯುಮೆಂಟರಿ’ ವಿಭಾಗದಲ್ಲಿ ’ದಿ ಎಲಿಫೆಂಟ್ ವಿಸ್ಪರರ್ಸ್’ ಚಿತ್ರವನ್ನು ವಿಜೇತ ಎಂದು ಘೋಷಿಸಲಾಗಿತ್ತು. 41 ನಿಮಿಷಗಳ ಈ ಡಾಕ್ಯುಮೆಂಟರಿಯಲ್ಲಿ ಅನಾಥ ಆನೆ ರಘುನನ್ನು ಪಾಲಿಸಿ ಪೋಷಿಸುವ ಬೊಮ್ಮನ್ ಹಾಗೂ ಬೆಲ್ಲಿರ ಜೀವನವನ್ನು ತೋರಲಾಗಿದೆ.
ಸದ್ಯ ಮುದುಮಲೈ ರಾಷ್ಟ್ರೀಯ ಅಭಯಾರಣ್ಯದಲ್ಲಿರುವ ರಘು ಈ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ಪ್ರವಾಸಿಗರಲ್ಲಿ ಭಾರೀ ಜನಪ್ರಿಯನಾಗಿದ್ದಾನೆ. ಆತನನ್ನು ನೋಡಲು ಮುದುಮಲೈಗೆ ದೊಡ್ಡ ಸಂಖ್ಯೆಯ ಪ್ರವಾಸಿಗರು ಜಮಾಯಿಸುತ್ತಿದ್ದಾರೆ.
https://twitter.com/supriyasahuias/status/1639131605435576322?ref_src=twsrc%5Etfw%7Ctwcamp%5Etweetembed%7Ctwterm%5E1639131605435576322%7Ctwgr%5Edda036436dc2743f45d3d34f74bb96386ec09131%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fviral-video-the-elephant-whisperers-couple-bomman-bellie-travels-in-flight-indigo-pilot-gives-shoutout-to-them