ಮತ್ತೊಮ್ಮೆ ಸುದ್ದಿಯಾದ ದೆಹಲಿ ಮೆಟ್ರೋ; ಯುವತಿಯರ ಪೋಲ್ ಡ್ಯಾನ್ಸಿಂಗ್ ವಿಡಿಯೋ ವೈರಲ್

ಪ್ರಯಾಣಿಕರ ವಿಚಿತ್ರ ವರ್ತನೆಗಳಿಂದ ಪದೇ ಪದೇ ಸುದ್ದಿಯಾಗುವ ದೆಹಲಿ ಮೆಟ್ರೋ ಮತ್ತೊಮ್ಮೆ ಇದೇ ವಿಷಯಕ್ಕೆ ಗುರಿಯಾಗಿದೆ. ಯುವಜೋಡಿಯ ಕಿಸ್ಸಿಂಗ್, ಗಲಾಟೆ ಸೇರಿದಂತೆ ಹಲವು ಘಟನೆಗಳಿಗೆ ಸಾಕ್ಷಿಯಾಗಿರುವ ಮೆಟ್ರೋ ರೈಲಿನಲ್ಲಿ ಇಬ್ಬರು ಯುವತಿಯರು ಪೋಲ್ ಡ್ಯಾನ್ಸ್ ಮಾಡುವ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಹೊಸ ವಿಡಿಯೋದಲ್ಲಿ ಪರ್ವೀನ್ ಬಾಬಿ ಮತ್ತು ಶಶಿ ಕಪೂರ್ ನಟಿಸಿದ ʼಸುಹಾಗ್ʼ ಚಿತ್ರದ ʼಮೈನ್ ತು ಬೇಘರ್ ಹೂನ್ʼ ಹಾಡಿಗೆ ಇಬ್ಬರು ಯುವತಿಯರು ನೃತ್ಯ ಮಾಡಿದ್ದಾರೆ. ʼಹಸ್ನಾ ಜರೂರಿ ಹೈʼ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಏತನ್ಮಧ್ಯೆ ಬುಧವಾರ ದೆಹಲಿ ಮೆಟ್ರೋದಲ್ಲಿ ಕನ್ವಾರಿಯಾಗಳು ನೃತ್ಯ ಮಾಡುವ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ. ಕನ್ವಾರಿಯಾಗಳು ಶಿವನ ಭಕ್ತರಾಗಿದ್ದು ಅವರು ಉತ್ತರಾಖಂಡ್‌ನ ಹರಿದ್ವಾರ, ಗೌಮುಖ ಮತ್ತು ಗಂಗೋತ್ರಿ ಮತ್ತು ಬಿಹಾರದ ಸುಲ್ತಂಗಂಜ್‌ಗೆ ಭೇಟಿ ನೀಡುತ್ತಾರೆ. ಶ್ರಾವಣ ಮಾಸದಲ್ಲಿ ಗಂಗಾನದಿಯಿಂದ ಪವಿತ್ರ ನೀರನ್ನು ತರುತ್ತಾರೆ.

https://twitter.com/HasnaZarooriHai/status/1676871173769142272?ref_src=twsrc%5Etfw%7Ctwcamp%5Etweetembed%7Ctwterm%5E1676871173769142272%7Ctwgr%5E8147dcdf740371a17d538390c51d2ab6857a61f3%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fviral-video-shows-women-pole-dancing-in-delhi-metro-2402799-2023-07-06

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read