Rajasthan: ಮುಸ್ಲಿಂ ವಿದ್ಯಾರ್ಥಿಗಳು ನಮಾಜ಼್ ಮಾಡುತ್ತಿದ್ದ ವೇಳೆ ಸಹಪಾಠಿಗಳಿಂದ ’ಜೈ ಶ್ರೀರಾಮ್’ ಘೋಷಣೆ; ಹಳೆ ವಿಡಿಯೋ ಮತ್ತೆ ವೈರಲ್

ರಾಜಸ್ಥಾನದ ಕೋಟಾದ ಕೋಚಿಂಗ್ ಕೇಂದ್ರವೊಂದರ ಮುಸ್ಲಿಂ ವಿದ್ಯಾರ್ಥಿಗಳ ಗುಂಪೊಂದು ನಮಾಜ಼್‌ ಮಾಡುತ್ತಿರುವ ವೇಳೆಯೇ ಕೆಲ ವಿದ್ಯಾರ್ಥಿಗಳಿಂದ ’ಜೈ ಶ್ರೀರಾಮ್’ ಘೋಷಣೆ ಮೊಳಗಿದ ಘಟನೆಯ ವಿಡಿಯೋ ವೈರಲ್ ಆಗಿದೆ.

ಈ ಘಟನೆಯು ತರಗತಿಗಳ ವೇಳೆಯೇ ಜರುಗುತ್ತಿದೆ ಎಂದು ಮೇಲುನೋಟಕ್ಕೆ ಕಂಡು ಬರುತ್ತಿದೆ. ಸ್ಫರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಕೇಂದ್ರವಾಗಿರುವ ಕೋಟಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ವಿಡಿಯೋವನ್ನು ಗಮನಿಸಿದ ರಾಜಸ್ಥಾನ ಪೊಲೀಸ್ ಸಹಾಯವಾಣಿ ಹಾಗೂ ಕೋಟಾ ನಗರ ಪೊಲೀಸ್‌, ಈ ಘಟನೆ ನಡೆದಿದ್ದು 2020ರಲ್ಲಿ ಎಂದು ಸ್ಪಷ್ಟೀಕರಣ ಕೊಟ್ಟಿದ್ದು, ಆ ವೇಳೆ ಸಂಬಂಧ ಪಟ್ಟ ಸಂಸ್ಥೆಯ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸುವುದರೊಂದಿಗೆ, ಆ ಊರಿನಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಯೇ ಇದೆ ಎಂದು ತಿಳಿಸಿದೆ.

ಈ ವಿಡಿಯೋಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, “ಜಸ್ಟ್ ಒಂದು ಸರಳ ಪ್ರಶ್ನೆ: ನಮಾಜ಼್ ಮಾಡಲೆಂದು ಮುಸ್ಲಿಂ ವಿದ್ಯಾರ್ಥಿಗಳಿಗೆ ವಿಶೇಷ ಕೋಣೆಯನ್ನು ಏಕೆ ನೀಡಲಾಗಿದೆ  ? ಅವರು ಮನೆಯಲ್ಲಿ ಅಥವಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಬಹುದಲ್ಲ ? ನಮಾಜ಼್ ಓಕೆಯಾದರೆ ಜೈ ಶ್ರೀರಾಮ ಏಕೆ ಓಕೆ ಅಲ್ಲ?” ಎಂದು ಪ್ರಶ್ನಿಸಿದ್ದಾರೆ.

https://twitter.com/RajPoliceHelp/status/1673345728297545732?ref_src=twsrc%5Etfw%7Ctwcamp%5Etweetembed%7Ctwterm%5E1673346398366867461%7Ctwgr%5E40d0ce93a34745640a4c1d04516782856967983b%7Ctwcon%5Es2_&ref_url=https%3A%2F%2Fwww.freepressjournal.in%2Feducation%2Fviral-video-shows-students-raising-jai-shri-ram-slogan-as-muslim-classmates-offer-namaaz

https://twitter.com/ItsKhan_Saba/status/1673284859232665605?ref_src=twsrc%5Etfw%7Ctwcamp%5Etweetembed%7Ctwterm%5E1673284859232665605%7Ctwgr%5E40d0ce93a34745640a4c1d04516782856967983b%7Ctwcon%5Es1_&ref_url=https%3A%2F%2Fwww.freepressjournal.in%2Feducation%2Fviral-video-shows-students-raising-jai-shri-ram-slogan-as-muslim-classmates-offer-namaaz

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read