ಚಿಕಾಗೋದ ಓ’ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಗಲಾಟೆ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ. ಹತ್ತಾರು ಮಂದಿ ವಿಮಾನ ನಿಲ್ದಾಣದಲ್ಲಿ ಗಲಾಟೆ ಮಾಡುತ್ತಿರುವುದನ್ನು ಕಾಣಬಹುದು.
ವಿಮಾನ ನಿಲ್ದಾಣದ ಬ್ಯಾಗೇಜ್ ಕ್ಲೈಮ್ ಏರಿಯಾದಲ್ಲಿ ಜಗಳ ನಡೆದಿದ್ದು, ಈ ವೇಳೆ 24 ವರ್ಷದ ಯುವತಿಗೆ ಮತ್ತಿಬ್ಬರು ಗುದ್ದಿದ್ದಾರೆ. ನಂತರ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ರೀತಿ ಗಲಾಟೆ ಮಾಡಿದವರನ್ನು 18 ವರ್ಷದ ಕ್ರಿಸ್ಟೋಫರ್ ಹ್ಯಾಂಪ್ಟನ್ ಮತ್ತು 20 ವರ್ಷದ ಟೆಂಬ್ರಾ ಹಿಕ್ಸ್ ಎಂದು ಗುರುತಿಸಲಾಗಿದೆ. ಈ ವಿಡಿಯೋದಲ್ಲಿ ಪುರುಷರು ಗುದ್ದಾಡುತ್ತಿರುವುದನ್ನು ಮತ್ತು ಮಹಿಳೆಯರ ಗುಂಪು ನೆಲದ ಮೇಲೆ ಮಲಗಿ ಪರಸ್ಪರ ಕೂದಲನ್ನು ಎಳೆಯುತ್ತಿರುವುದನ್ನು ನೋಡಬಹುದು. ಘಟನೆಯ ಬಗ್ಗೆ ಪೊಲೀಸರು ಬೇರೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.
https://twitter.com/Mr_Bogus0007/status/1661053731973087253?ref_src=twsrc%5Etfw%7Ctwcamp%5Etweetembed%7Ctwterm%5E1661053731973087253%7Ctwgr%5E9edffe3323db8d8550dacd06854c697b006732bb%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fviral-video-shows-massive-fight-at-chicago-airport-2-arrested-4061738