Shocking Video | ಡಿಸಿ ಕಚೇರಿ ಎದುರೇ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ದಂಪತಿ….!

ವೈವಾಹಿಕ ಜಗಳದ ಹಿನ್ನೆಲೆ ಮಾತುಕತೆಗೆಂದು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ದಂಪತಿ ತಾಳ್ಮೆ ಕಳೆದುಕೊಂಡು ಪರಸ್ಪರ ಹೊಡೆದಾಡುಕೊಂಡಿದ್ದಾರೆ. ಉತ್ತರಪ್ರದೇಶದ ಸಂಬಾಲ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.

ಗುನ್ನೌರ್‌ನ ಮಹಿಳೆ ಮತ್ತು ಖಜ್ರಾ ಗ್ರಾಮದ ಪತಿ ನಡುವೆ ಮನಸ್ತಾಪವಿತ್ತು. ಇಬ್ಬರೂ ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತಿ ಪ್ರಯತ್ನದ ಹೊರತಾಗಿಯೂ ಗಂಡನ ಕುಟುಂಬ ಸೇರಲು ಮಹಿಳೆ ನಿರಾಕರಿಸಿದ್ದಳು.

ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಪ್ರಯತ್ನದಲ್ಲಿ ದಂಪತಿ ತಮ್ಮ ಕುಟುಂಬಗಳೊಂದಿಗೆ ಡಿಸಿ ಕಚೇರಿಗೆ ಬಂದಿದ್ದರು. ಈ ವೇಳೆ ಎರಡು ಕಡೆಯವರ ನಡುವಿನ ವಾಗ್ವಾದವು ಉಲ್ಬಣಗೊಂಡು ವಾಗ್ವಾದಕ್ಕೆ ತಿರುಗಿತು. ಗಂಡ-ಹೆಂಡತಿ ಪರಸ್ಪರ ಬೈಯತೊಡಗಿದರು. ಕೆಲವೇ ಸಮಯದಲ್ಲಿ ನಿಂದನೆ, ಒದೆತ, ಹೊಡೆತಗಳು ಶುರುವಾದವು. ಎರಡು ಗುಂಪುಗಳ ನಡುವೆ ಚಪ್ಪಲಿಯಿಂದ ಹೊಡೆದಾಟ ನಡೆಯಿತು.

ಗದ್ದಲ ಹೆಚ್ಚಾದಂತೆ ಸಾರ್ವಜನಿಕರು ಜಮಾಯಿಸಿದರು. ಸುಮಾರು 15 ನಿಮಿಷಗಳ ಕಾಲ ಮಾತಿನ ಚಕಮಕಿ ನಡೆದಿದ್ದು, ಜಿಲ್ಲಾಧಿಕಾರಿ ಚೌಕಿ ಪ್ರಭಾರಿ ಹಾಗೂ ಇತರ ಕೆಲವು ಪೊಲೀಸ್ ಸಿಬ್ಬಂದಿ ಮಧ್ಯ ಪ್ರವೇಶಿಸಿದರು. ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ಆರಂಭಿಸಿದ್ದಾರೆ.

https://twitter.com/gharkekalesh/status/1833728795330687409?ref_src=twsrc%5Etfw%7Ctwcamp%5Etweetembed%7Ctwterm%5E1833728795330687409%7Ctwgr%5E7a67210471dd3cec041b6164c5769fac2631

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read