ಕ್ರಿಕೆಟ್ ಬೆಟ್ಟಿಂಗ್ ಅಪ್ಲಿಕೇಷನ್ ನಲ್ಲಿ 96 ಲಕ್ಷ ರೂ. ಕಳೆದುಕೊಂಡ ಯುವಕ; ಶಾಕ್ ಆಗಿಸುವಂತಿದೆ ಈ ‘ವಿಡಿಯೋ’

ಕ್ರಿಕೆಟ್ ಬೆಟ್ಟಿಂಗ್ ಅಪ್ಲಿಕೇಷನ್ ಗಳನ್ನು ಬಳಸುವ ಯುವ ಸಮೂಹ ಪ್ರಸ್ತುತ ಸಮಾಜದಲ್ಲಿ ಹೆಚ್ಚಿದೆ. ಸುಲಭವಾಗಿ ದುಡ್ಡು ಮಾಡಬಹುದೆಂಬ ಆಸೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಅಪ್ಲಿಕೇಷನ್ ನಲ್ಲಿ ಯುವಕರು ದುಡ್ಡು ಹೂಡುತ್ತಾರೆ. ಆದರೆ ಇಂತಹ ಪ್ರಯತ್ನದಲ್ಲಿ ಯುವಕನೊಬ್ಬ ಬರೋಬ್ಬರಿ 96 ಲಕ್ಷ ರೂಪಾಯಿ ಕಳೆದುಕೊಂಡು ಕಣ್ಣೀರು ಹಾಕಿದ್ದಾನೆ. ವೈರಲ್ ವೀಡಿಯೊವೊಂದು ಯುವಕನ ಕಣ್ಣೀರ ಕಥೆಯನ್ನು ತೆರೆದಿಟ್ಟಿದ್ದು ಎಚ್ಚರಿಕೆ ನೀಡಿದೆ.

ನ್ಯೂಸ್ 18 ಇಂಡಿಯಾ ವಾಹಿನಿ ನೇರ ಪ್ರಸಾರ ಕಾರ್ಯಕ್ರಮವೊಂದನ್ನು ನಡೆಸ್ತಿದ್ದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತಿದ್ದ ಯುವಕ ಕ್ರಿಕೆಟ್ ಬೆಟ್ಟಿಂಗ್ ಅಪ್ಲಿಕೇಷನ್ ನಲ್ಲಿ 96 ಲಕ್ಷ ರೂಪಾಯಿ ಕಳೆದುಕೊಂಡಿರುವಾಗಿ ತಪ್ಪೊಪ್ಪಿಕೊಂಡಿದ್ದ.

ಜಾಹೀರಾತನ್ನು ನೋಡಿದ ನಂತರ ಆರಂಭದಲ್ಲಿ ತನ್ನ ಬಿ.ಟೆಕ್ ಶಿಕ್ಷಣಕ್ಕಾಗಿ ಹಣವನ್ನು ಜೂಜಾಡಲು ಬಳಸಿದ್ದಾಗಿ ಯುವಕ ಬಹಿರಂಗಪಡಿಸಿದ್ದಾನೆ. ವ್ಯಸನ ಬೆಳೆಯುತಾ ಹೋದಂತೆ ಅವನು ಇತರರಿಂದ ಹಣವನ್ನು ಎರವಲು ಪಡೆದು ಸಾಲದ ಸುಳಿಗೆ ಸಿಲುಕಿದ. ಹಣಕ್ಕಾಗಿ ಮೋಸದ ಕೃತ್ಯದಲ್ಲೂ ತೊಡಗಿದ್ದ. ಇದರಿಂದ ಅವರ ಕುಟುಂಬ ಯುವಕನ ಮುಖವನ್ನೂ ನೋಡದೇ ಅವನನ್ನು ಅವಮಾನಿಸಿದೆ. ನನ್ನ ತಾಯಿ ಕೂಡ ನನ್ನೊಂದಿಗೆ ಮಾತನಾಡುತ್ತಿಲ್ಲ ಎಂದು ಯುವಕ ಅವಲತ್ತುಕೊಂಡಿದ್ದಾನೆ.

https://twitter.com/khurpenchh/status/1836669456711381330?ref_src=twsrc%5Etfw%7Ctwcamp%5Etweetembed%7Ctwterm%5E1836669456711381330%7Ctwgr%5Ef4296c11b5bb6f94616a590112a0f0192ade73de%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fdnpindia-epaper

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read