ನೀರಿಲ್ಲದೇ ಒದ್ದಾಡುತ್ತಿದ್ದ ಮೀನನ್ನು ರಕ್ಷಿಸಿದ ಶ್ವಾನ…! ವಿಡಿಯೋ ವೈರಲ್​

ಗಾಳಕ್ಕೆ ಸಿಲುಕಿದ್ದ ಮೀನನ್ನು ಉಳಿಸೋಕೆ ಶ್ವಾನವೊಂದು ಮಾಡಿದ ಪ್ರಾಮಾಣಿಕ ಪ್ರಯತ್ನದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದು ಶ್ವಾನಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.

ಟ್ವಿಟರ್​ನಲ್ಲಿ ವೈರಲ್​ ಆಗ್ತಿರುವ ವಿಡಿಯೋ ಇದಾಗಿದ್ದು ವ್ಯಕ್ತಿಯೊಬ್ಬ ತನ್ನ ಮುದ್ದಿನ ನಾಯಿಯೊಂದಿಗೆ ಹೊಳೆಯಲ್ಲಿ ಮೀನುಗಾರಿಕೆ ಮಾಡುತ್ತಿರುತ್ತಾರೆ.

ಮೀನುಗಾರಿಕೆ ಮಾಡುತ್ತಿದ್ದ ವ್ಯಕ್ತಿ ಒಂದು ಮೀನನ್ನು ಗಾಳಕ್ಕೆ ಬೀಳಿಸೋದ್ರಲ್ಲಿಯೂ ಯಶಸ್ವಿಯಾಗ್ತಾರೆ. ಕೆಂಪು ಬಣ್ಣದ ಪಾತ್ರೆಯಲ್ಲಿ ಆ ಮೀನನ್ನು ಇರಿಸುತ್ತಾರೆ. ಇದಾದ ಬಳಿಕ ಏನಾಯ್ತು ಅನ್ನೋದು ಈ ವಿಡಿಯೋದ ಹೈಲೈಟ್​ ಆಗಿದೆ. ಕೂಡಲೇ ಮೀನಿದ್ದ ಪಾತ್ರೆಯ ಸಮೀಪ ಬಂದ ಶ್ವಾನವು ಮೀನನ್ನು ಪುನಃ ನೀರಿಗೆ ಎಸೆದಿದೆ .

ಪಾತ್ರೆಯಲ್ಲಿದ್ದಾಗ ಜೀವಂತವಿದ್ದ ಮೀನು ವಿಲವಿಲ ಒದ್ದಾಡುತ್ತಿತ್ತು. ಇದನ್ನು ನೋಡಿದ ಶ್ವಾನವು ಇಡೀ ಬಟ್ಟಲನ್ನು ಹೊಳೆಗೆ ತಳ್ಳುವ ಮೂಲಕ ಮೀನಿನ ಪ್ರಾಣ ಉಳಿಸಿದೆ. ಕೊನೆಗೆ ಮನುಷ್ಯನನ್ನೇ ಶ್ವಾನವು ಎಳೆದುಕೊಂಡು ಹೋಗಿದ್ದು ಈ ವಿಡಿಯೋ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

https://twitter.com/i/status/1678785804494159873

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read