Viral Video: ಲೈವ್ ಕಾರ್ಯಕ್ರಮದಲ್ಲೇ ಗಾಯಕನನ್ನು ಬಿಗಿದಪ್ಪಿ ಚುಂಬಿಸಿದ ಲೇಡಿ ಕಾನ್ಸ್ ಟೇಬಲ್…!

ಬಾಲಿವುಡ್ ನ ಖ್ಯಾತ ಹಿನ್ನೆಲೆ ಗಾಯಕ ಜುಬೀನ್ ಗಾರ್ಗ್ ಇತ್ತೀಚಿಗೆ ಸಾರ್ವಜನಿಕ ವೇದಿಕೆಯೊಂದರಲ್ಲಿ ಮುಜುಗರಕ್ಕೊಳಗಾದ ಘಟನೆ ನಡೆದಿದ್ದು, ಅವರನ್ನು ಅಪ್ಪಿಕೊಂಡು ಮುತ್ತು ಕೊಟ್ಟ ಮಹಿಳಾ ಕಾನ್ಸ್ ಟೇಬಲ್ ರನ್ನು ಅಮಾನತುಗೊಳಿಸಲಾಗಿದೆ.

ಇತ್ತೀಚೆಗೆ ಮೇ 10, 2024 ರಂದು ಅಸ್ಸಾಂನ ದಿಬ್ರುಗಢದಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಅತ್ಯಂತ ವಿಚಿತ್ರವಾದ ಪರಿಸ್ಥಿತಿಯನ್ನು ಜುಬೀನ್ ಗಾರ್ಗ್ ಎದುರಿಸಿದರು.

ಜುಬಾ ಐಕ್ಯ ಮಂಚಾ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಜುಬೀನ್ ಗರ್ಗ್ ಅವರನ್ನು ಮಹಿಳಾ ಕಾನ್‌ಸ್ಟೇಬಲ್ ಮಿಲಿಪರಭಾ ಚುಟಿಯಾ ಅವರು ವೇದಿಕೆಯ ಮೇಲೆ ಹತ್ತಿ ಬಿಗಿಯಾಗಿ ಅಪ್ಪಿಕೊಂಡು ಮುತ್ತು ನೀಡಿದರು. ಅವರ ಕಾಲಿಗೆ ಬಿದ್ದು ಮುಜುಗರವಾಗುವ ರೀತಿಯಲ್ಲಿ ವರ್ತಿಸಿದರು.

ಈ ವೇಳೆ ಗಾಯಕ ಜಬೀನ್ ಗರ್ಗ್ ಸಭ್ಯವಾಗಿರಲು ಪ್ರಯತ್ನಿಸಿ ಕಾನ್ ಸ್ಟೇಬಲ್ ವೇದಿಕೆಯಿಂದ ಹೊರಗೆ ಹೋಗುವವರೆಗೂ ತಮ್ಮ ಶಾಂತತೆಯನ್ನು ಕಾಪಾಡಿಕೊಂಡರು.

ಇಡೀ ಘಟನೆಯ ವಿಡಿಯೋ ಕ್ಯಾಮರಾದಲ್ಲಿ ದಾಖಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಏತನ್ಮಧ್ಯೆ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ವರ್ತನೆಗಾಗಿ ಮಿಲಿಪರಾಭಾ ಚುಟಿಯಾ ವಿರುದ್ಧ ಕಠಿಣ ಕ್ರಮ ಕೈಗೊಂಡ ಅಸ್ಸಾಂ ಪೊಲೀಸರು ಅವರನ್ನು ಅಮಾನತುಗೊಳಿಸಿದ್ದಾರೆ .

ವೈರಲ್ ವೀಡಿಯೊ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಮಹಿಳಾ ಕಾನ್ಸ್ ಟೇಬಲ್ ನಡವಳಿಕೆಯಿಂದ ಅವರು ತಮ್ಮ ಪೊಲೀಸ್ ಸಮವಸ್ತ್ರವನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಲವರು ಆಕೆ ಗಾಯಕನಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದರೆ, ಮತ್ತೊಬ್ಬರು ‘ನೀವು ಒಂದು ನಿರ್ದಿಷ್ಟ ವೃತ್ತಿಯನ್ನು ಆರಿಸಿಕೊಂಡಾಗ ನಿಮ್ಮ ಭಾವನೆಗಳ ಮೇಲೆ ನೀವು ನಿಯಂತ್ರಣ ಹೊಂದಿರಬೇಕು.’ ಎಂದಿದ್ದಾರೆ.

https://twitter.com/NANDANPRATIM/status/1790438300005622252?ref_src=twsrc%5Etfw%7Ctwcamp%5Etweetembed%7Ctwterm%5E1790438300005622252%7Ctwgr%5E0d0ea6999bb6c01f8821ef2007cf2591c080c408%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnewsroompost-epaper-dhbf4ce091df1d4c28819e43b257c2d435%2Fviralvideoladyconstablesuspendedforkissinghuggingyaalisingerzubeengargduringliveperformanceinassamnetizensreact-newsid-n608873652

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read