ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರೇಜ್ ಎಷ್ಟಿದೆಯೆಂದರೆ ಪ್ರತಿಯೊಂದು ಪಂದ್ಯವೂ ದೇಶದಾದ್ಯಂತ ಕಿಕ್ಕಿರಿದ ಕ್ರೀಡಾಂಗಣಗಳಿಗೆ ಸಾಕ್ಷಿಯಾಗಿದೆ. T20 ಲೀಗ್‌ನ 2023 ರ ಆವೃತ್ತಿಯಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ವೀಕ್ಷಿಸಲು ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಬರ್ತಿದ್ದು ಮೈದಾನದಲ್ಲಿ ತೀವ್ರವಾದ ಗಲಾಟೆಯೂ ಕೆಲವೊಮ್ಮೆ ನಡೆಯುತ್ತದೆ.
ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ಎರಡೂ ತಂಡದ ಅಭಿಮಾನಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಸ್ಟೇಡಿಯಂನೊಳಗೆ ಒಟ್ಟು 5-6 ಜನರು ಪರಸ್ಪರ ಗಲಾಟೆ ಮಾಡಿಕೊಂಡು ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಈ ಗಲಾಟೆಗೆ ಕಾರಣವೇನು ಅನ್ನೋದು ಸ್ಪಷ್ಟವಾಗಿಲ್ಲ.
https://twitter.com/mufaddal_vohra/status/1652506293113077764?ref_src=twsrc%5Etfw%7Ctwcamp%5Etweetembed%7Ctwterm%5E1652506293113077764%7Ctwgr%5Ea75168cbfabce0bccb1f472720ac846efeb3a3b6%7Ctwcon%5Es1_&ref_url=https%3A%2F%2Fsports.ndtv.com%2Fipl-2023%2Fhuge-brawl-breaks-out-between-fans-in-delhi-during-ipl-match-video-goes-viral-3991875