Viral Video | ಮದುವೆ ವೇದಿಕೆಯಿಂದ ಇದ್ದಕ್ಕಿದ್ದಂತೆ ಜಿಗಿದು ಸ್ನೇಹಿತರೊಂದಿಗೆ ಕುಣಿದುಕುಪ್ಪಳಿಸಿದ ವರ

ತನ್ನ ಮದುವೆಯಲ್ಲಿ ವರ ವೇದಿಕೆಯಿಂದ ಕೆಳಗಿಳಿದು ಸ್ನೇಹಿತರೊಂದಿಗೆ ನೃತ್ಯ ಮಾಡಿದ್ದು ಸಂತಸ ಪಟ್ಟಿದ್ದಾನೆ. ಮದುವೆಯ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಉಫ್ ತೇರಿ ಅದಾ’ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡ ವೀಡಿಯೊ, ವರನ ಮದುವೆಯ ಸಮಯದಲ್ಲಿ ಉಲ್ಲಾಸದ ಮತ್ತು ಅನಿರೀಕ್ಷಿತ ಕ್ಷಣವನ್ನು ಸೆರೆಹಿಡಿದಿದೆ.

ಮದುವೆಯ ವೇದಿಕೆಯಲ್ಲಿ ವರನು ತನ್ನ ವಧುವಿನ ಜೊತೆ ಕುಳಿತಿರುತ್ತಾನೆ. ಆದಾಗ್ಯೂ, ಅವನ ಗಮನವು ಬೀದಿಯಲ್ಲಿ ತನ್ನ ಸ್ನೇಹಿತರು ಮತ್ತು ಕುಟುಂಬವು ನೃತ್ಯ ಮಾಡುತ್ತಿರುವುದರ ಮೇಲೆಯೇ ಇರುತ್ತದೆ. ತಾನೂ ನೃತ್ಯ ಮಾಡಬೇಕೆಂಬ ಆಸೆಯನ್ನು ಹೆಚ್ಚು ಹೊತ್ತು ಅದುಮಿಟ್ಟುಕೊಳ್ಳದೇ ವೇದಿಕೆಯಿಂದ ಜಿಗಿದು ನೃತ್ಯಗಾರರೊಂದಿಗೆ ಸೇರಿಕೊಂಡು ಕುಣಿಯುತ್ತಾ ಎಲ್ಲರೂ ನಗುವಂತೆ ಮಾಡುತ್ತಾನೆ.

ಐದು ದಿನಗಳ ಹಿಂದೆ ಹಂಚಿಕೊಂಡಿರುವ ಈ ವಿಡಿಯೋ ಈಗಾಗಲೇ 1 ಲಕ್ಷ ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವರನ ಹಠಾತ್ ನೃತ್ಯವನ್ನು ಸ್ಪೂರ್ತಿದಾಯಕ ಮತ್ತು ವಿನೋದಮಯ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read